ದೇವನಹಳ್ಳಿ: ರಾಜ್ಯದಲ್ಲಿ ತಿಗಳ ಜನಾಂಗದ ತಾಯಿ ದ್ರೌಪದಿಯ ಆಶೀರ್ವಾದದಿಂದ ಹಾಗೂ ಕರಗ ಮಹೋತ್ಸವ ಆಚರಣೆಯಿಂದ ಉತ್ತಮ ಮಳೆ ಬೆಳೆ ಕಾಲ-ಕಾಲಕ್ಕೆ ಆಗುತ್ತಿದೆ, ಶಕ್ತಿ ಸ್ವರೂಪಿಣಿ ದ್ರೌಪದಿಯ ಆರಾಧಕರಾದ ತಿಗಳ ಸಮುದಾಯ ಭಕ್ತಿ, ಧೈರ್ಯ ನಂಭಿಕೆಗೆ ಪ್ರಸಿದ್ದಿ ಪಡೆದಿದ್ದು, ಕಷ್ಠಪಟ್ಟು ದುಡಿವ ಸಮುದಾಯವಾಗಿದೆ, ತಿಗಳ ಸಮುಧಾಯದ ಬೆಂಗಳೂರು ಕರಗದ ವಿಶ್ವವಿಖ್ಯಾತಿ ಪಡೆದಿದ್ದು, ವಿಶ್ವದೆಲ್ಲೆಡೆಯಿಂದ ಬೆಂಗಳೂರಿಗೆ ಬರುವಂತಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ||ಕೆ.ಸುಧಾಕರ್ ಆಶಯ ವ್ಯಕ್ತಪಡಿಸಿದರು.
ಅವರು ದೇವನಹಳ್ಳಿ ನಗರದ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಚಿಕ್ಕಬಳ್ಳಾ ಪುರದ ಅಖಿಲ ಭಾರತ ತಿಗಳ ಮಹಾಸಭಾದ ರಾಜ್ಯಾಧ್ಯಕ್ಷ ಎಸ್.ಆರ್.ಎಸ್. ದೇವರಾಜು ನೇತ್ರತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿಗಳ(ವಹ್ನಿಕುಲ ಕ್ಷತ್ರೀಯ) ಸಮುದಾಯದಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಸಂಸದ ಡಾ||ಕೆ.ಸುಧಾಕರ್ ಅಭಿನಂದನೆ ಸ್ವೀಕರಿಸಿ ಮಾತಾನಾಡಿ ತಿಗಳ ಜನಾಂಗದವರೊಂದಿಗೆ ನಾನಿರುತ್ತೇನೆ ಚಿಕ್ಕ ಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರತಿಯೊಬ್ಬ ಮತದಾರರ ಅಭಿವೃದ್ಧಿ ಜವಾಬ್ದಾರಿ ನನ್ನದು,
ತಿಗಳ ಸಮುದಾಯ ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು, ನಮ್ಮ ಪಕ್ಷಕ್ಕಾಗಿ ದುಡಿದ ವ್ಯಕ್ತಿಗಳನ್ನು ನಿಗಮ ಮಂಡಲಿಗೆ ಶಿಫಾರಸ್ ಮಾಡುತ್ತೇನೆ, ತಿಗಳ ಸಮುದಾಯದ ಅಭಿವೃದ್ಧಿಗೆ ಹಲವು ಅವಕಾಶ ಕಲ್ಪಿಸಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.ತಿಗಳ ಸಂಘದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿಗಳ(ವಹ್ನಿಕುಲ ಕ್ಷತ್ರೀಯ) ಸಮುದಾಯದ ವತಿಯಿಂದ ಕ್ಷೇತ್ರದಲ್ಲಿನ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಬೇಕು, ನಿಗಮಗಳಲ್ಲಿ ಒಂದು ಸ್ಥಾನವನ್ನು ಕಲ್ಪಿಸಿ, ಸಂಘದ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು ಎಂದು ಸಂಸದರಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬುಳ್ಳಹಳ್ಳಿಯ ಆಧಿಪರಾಶಕ್ತಿ ಮಹಾಸಂಸ್ಥಾನ ಪೀಠದ ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ತಿಗಳ ಸಮುದಾಯದ ಮುಖಂಡರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತುಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಎಸ್ ಆರ್ ಎಸ್ ಡಾ||ವಿ.ದೇವರಾಜ್ ವಹ್ನಿಕುಲ ಕ್ಷತ್ರೀಯ ಸಂಘದ ರಾಜ್ಯಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಶಾಸಕರಾದ ಜಿ. ಚಂದ್ರಣ್ಣ, ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಸಂಘ ಉಪಾಧ್ಯಕ್ಷ ವೈ.ಎನ್ ಶಾಮಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಆರ್. ಮುನಿವೀರಣ್ಣ, ಕನಕರಾಜ್,
ಜೆ,ಡಿಎಸ್.ಕಾರ್ಯಾಧ್ಯಕ್ಷ ಕುಂದಾಣಹೋಬಳಿ ವೆಂಕಟಾಪುರದ ಲಕ್ಷ್ಮಣ್, ಮೌಕ್ತಿಕಾಂಭ ದೇವಸ್ಥಾನ ಅಧ್ಯಕ್ಷ ಎಸ್.ಆರ್.ವಿಜಯಕುಮಾರ್, ತಾಲೂಕು ತಿಗಳ ಸಂಘ|ದ ಅಧ್ಯಕ್ಷ ವಿ. ಗೋಪಾಲಕೃಷ್ಣ, ಸಿ.ಎಂ.ನಾರಾಯಣಸ್ವಾಮಿ, ಮುಖಂಡರುಗಳಾದ ಸುರೇಶ್ , ಮಂಜುನಾಥ್, ಜೆಡಿಎಸ್ ತಾಲ್ಲೂಕಿನ ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ದೇವಾಲಯದ ಅಧ್ಯಕ್ಷರುಗಳು, ಯಜಮಾನರು, ಗೌಡರು, ಗಣಚಾರಿಗಳು ಹಾಗೂ ಕುಲಬಾಂಧವರು ಉಪಸ್ಥಿತರಿದ್ದರು.