ಚಿತ್ರದುರ್ಗ: ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಂದು ವಾರದ ನಂತರ ಬೆಳಕಿಗೆ ಬಂದಿದೆ.ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೀತಾ(45) ಹಾಗೂ ಮಗಳಾದ ಲಾವಣ್ಯ(17) ಎಂಬುವರು ಒಂದು ವಾರದ ಹಿಂದೆ ನೇಣಿಗೆ ಶರಣಾಗಿದ್ದು ಇಬ್ಬರ ಶವಗಳು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿವೆ.
ಕಳೆದ ಆರು ತಿಂಗಳ ಹಿಂದೆ ಗೀತಾ ಪತಿ ಬಸವರಾಜ್ ಎಂಬುವರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದು, ಇದರಿಂದ ಗೀತಾ ಮತ್ತು ಮಗಳು ಲಾವಣ್ಯ ತೀವ್ರವಾಗಿ ನೊಂದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.