ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ ತೆರೆಮರೆಯಲ್ಲೇ ಪ್ರಕರಣಕ್ಕೆ ಎಂಟ್ರಿ ಕೊಡ್ತಾ ಸಿಬಿಐ ಎಂಬ ಪ್ರಶ್ನೆ ಎದುರಾಗಿದೆ. ತೆರೆಮರೆಯಲ್ಲಿ ಪ್ರಕರಣದ ಮಾಹಿತಿ ಕಲೆ ಹಾಕ್ತಿದ್ಯಾ ಸಿಬಿಐ ಎಂದು ಚರ್ಚೆ ನಡೆದಿದ್ದು, ಸದ್ಯ ಪ್ರಕರಣದ ತನಿಖೆ ನಡೆಸಿ ಮಹತ್ತರ ಘಟ್ಟ ತಲುಪಿರೋ ಎಸ್ಐಟಿ ತಂಡ ಪ್ರಾರಂಭದಿಂದಲೂ ಸಿಬಿಐಗೆ ಪ್ರಕರಣ ವರ್ಗಾವಣೆಯಾಗೋ ಬಗ್ಗೆ ಚರ್ಚೆ ನಡೆದಿದೆ.
ಅಂದುಕೊಂಡಂತೆ ಪ್ರಕರಣದ ತನಿಖೆ ಆರಂಭಿಸಿರುವ ಸಿಬಿಐ. 187 ಕೋಟಿ ಹಗರಣ ಎಂದ ಕೂಡಲೇ ಪ್ರಕರಣಕ್ಕೆ ಎಂಟ್ರಿಯಾಗಿರೋ ಸಿಬಿಐ. ಪ್ರಕರಣದಲ್ಲಿ 200 ಅಕೌಂಟ್ಗಳಿಗೆ ಹಣ ವರ್ಗಾವಣೆ ಕುರಿತು ಮಾಹಿತಿ ಕಲೆ ಹಾಕಿರುವ ಸಿಬಿಐ. ಅದರಂತೆ ಅಕೌಂಟ್ ಮಾಲೀಕರರನ್ನ ಈಗಾಗಲೇ ವಿಚಾರಣೆ ಮಾಡಿರುವ ಸಿಬಿಐ. ಜೊತೆಗೆ ಆರೋಪಿಗಳು ನಕಲಿ ಬ್ಯಾಂಕ್ ಖಾತೆ ತೆರೆಯಲು ಬಳಸಿದ್ದ ಕಂಪನಿ ಮಾಲೀಕರ ವಿಚಾರಣೆ ನಡೆಸಿದೆ.
ಬ್ಯಾಂಕ್ ಸ್ಟೇಟ್ಮೆಂಟ್ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಸಿಬಿಐ. ಸದ್ಯ ಸಿಬಿಐ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿರುವ ಮಾಲೀಕರು. ನಮ್ಮ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆರೆದಿರುವ ಮಾಲೀಕರು ವಿಚಾರವೇ ಗೊತ್ತಿಲ್ಲ ಎಂದಿದ್ದಾರೆ. ಸಿಐಡಿ ನೋಟೀಸ್ ಕೊಟ್ಟ ನಂತರವಷ್ಟೇ ವಿಚಾರ ತಿಳಿದಿರೋದಾಗಿ ಮಾಲೀಕರು ಹೇಳಿದ್ದಾರೆ.



