ಚಿಕ್ಕಬಳ್ಳಾಪುರ: ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ 187ಕೋಟಿ ಅನುಧಾನ ಹಗರಣದ ನಿಷ್ಪಷ್ಕಪಾತ ತನಿಖೆಗೆ ಆಗ್ರಹಿಸಿ ಜು.22ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿ ಆಯೋಜಿಸಲಾಗಿದೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳವಳಿ ರಾಜಣ್ಣ ತಿಳಿಸಿದರು.
ನಗರದ ಜಿಲ್ಲಾ ಪತ್ರರ್ಕರ ಭವನದಲ್ಲಿ ಬುಧವಾರ ಜಿಲ್ಲಾ ವಾಲ್ಮೀಕಿ ಸ್ವಾಭಿಮಾನಿ ಸಂಘದ ಪದಾಧಿಕಾರಿಗಳು ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿರುವುದು ಹಗಲು ದರೋಡೆ, ಹದ್ದು ಮೀರಿದ ವರ್ತನೆ, ಅಧಿಕಾರದ ದುರುಪಯೋಗದ ವಿರುದ್ಧ ಜು.22ರಂದು ನಿಗಮದ ಕುಂಠಿತ ಅಭಿವೃದ್ಧಿ ಕಾರ್ಯಕ್ರಮಗಳು,ಪರಿಶಿಷ್ಟ ಪಂಗಡದ ಇಲಾಖೆಯ ಸಮಗ್ರ ಶೈಕ್ಷಣಿಕ ಸಾಮಾಜಿಕ- ಆರ್ಥಿಕ- ಸಬಲೀಕರಣ ಕಾರ್ಯಕ್ರಮಗಳಿಗೆ ಹಿಂದಿನ ಉಳಿಕೆ ಹಾಲಿ ಅವಶ್ಯ ಅನುಧಾನ ಬಿಡುಗಡೆಗೆ ಒತ್ತಾಯಿಸಿ ಇದೆ ತಿಂಗಳ 22 ರಂದು ಬೆಂಗಳೂರಿನ ಪ್ರೀಡಂ ಪಾರ್ಕಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ಜಿಲ್ಲಾ ತಾಲೂಕು ಪ್ರಮುಖರು ಸುಮಾರು 2 ಸಾವಿರ ಮಂದಿ ಮಾತ್ರ ಸೇರಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ನಾಯಕ ದೇವರಾಜ ಅರಸು ಅನುಯಾಯಿ ಎಂದೆ ಬಿಂಬಿಸಿಕೊoಡಿದ್ದ ಸಿಎಂ ಸಿದ್ದರಾಮಯ್ಯ ಹಿಂದಿನ ಸರ್ಕಾರಕ್ಕಿಂತ ಭ್ರಷ್ಟಾಚಾರಿ ಎನಿಸಿಕೊಂಡಿದ್ದಾರೆ.ಬಿಜೆಪಿಯನ್ನು 40 ಪರ್ಸೆಂಟ್ ಸರಕಾರ ಎಂದು ಜರಿದಿದ್ದ ಕಾಂಗ್ರೆಸ್ ಸರ್ಕಾರ ಈಗ ನೂರು ಪರ್ಸೆಂಟ್ ಕಮೀಷನ್ ಸರ್ಕಾರ ಎನಿಸಿಕೊಳ್ಳುತ್ತಿದೆ.
ವಾಲ್ಮಿಕಿ ಅಭಿವೃದ್ದಿ ನಿಗಮದಲ್ಲಿ ಹಗಲು ದರೋಡೆ ಮಾಡಿರುವವರು, ಅದರಲ್ಲಿ ಶಾಮೀಲಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವವರ ಅಕ್ರಮ ಕೂಟ ಬಯಲಾಗಬೇಕು.ಎಸ್ಐಟಿ ತನಿಖೆ ಮಾತ್ರವಲ್ಲ ಪರಿಶಿಷ್ಟ ಜಾತಿ ಪಂಗಡಗಳ ಕಾಯ್ದೆ ದುರುಪಯೋಗವಾಗಿರುವ ಕಾರಣ, ದೌರ್ಜನ್ಯ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ನಾಯಕ ಎಸ್.ಆರ್ ನಾಯಕ್, ಸಂಜು.ಬಿ.ರಾಜ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಪಿ. ಎನ್.ಮಂಜುನಾಥ್, ತಾಲೂಕು ಅಧ್ಯಕ್ಷ
ನಾಗರಾಜ್, ಕೋಲಾರ ಜಿಲ್ಲಾಧ್ಯಕ್ಷ ನರಸಾಪುರ ನಾಗರಾಜ್, ತುಮಕೂರು ಅಧ್ಯಕ್ಷ ರಂಗನಾಥ್, ನoಜುoಡಪ್ಪ, ಗೋವಿoದಪ್ಪ, ನರಸಿoಹಮೂರ್ತಿ, ಪರುಷೋತ್ತಮ್ ಮತ್ತು ಇತರರು ಇದ್ದರು.