ಬೆಂಗಳೂರು: ಫುಡ್ ಟೆಕ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೌಜಿನಾ,ನ್ಯೂ ಸಿಲ್ಕ್ ರೂಟ್ ಪ್ರೈವೇಟ್ ಇಕ್ವಿಟಿಯಿಂದ ಐಕಾನಿಕ್ ಸೌತ್ ಇಂಡಿಯನ್
ರೆಸ್ಟೊರೆಂಟ್ ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿ ಕೊಂಡಿದೆ. ಈ ಸ್ವಾಧೀನದೊಂದಿಗೆ ಕೌಜಿನಾ ದಕ್ಷಿಣ ಭಾರತದಲ್ಲಿ ತ್ವರಿತ-ಸೇವಾ
ರೆಸ್ಟೋರೆಂಟ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ಭಾರತದಾದ್ಯಂತ ವಿಸ್ತರಿಸಲು ಯೋಜಿಸಿದೆ.
ಕರ್ನಾಟಕದಲ್ಲಿ ಬಹುಕಾಲದಿಂದ ಮನೆಮಾತಾಗಿರುವ ಬ್ರ್ಯಾಂಡ್ ಯಾವುದು ಎಂದರೆ ಅದು ವಾಸುದೇವ್ ಅಡಿಗಾಸ್ ಬ್ರ್ಯಾಂಡ್. ರಾಮೇಶ್ವರಂ ಕೆಫೆಯಂತಹ ಹೊಸ ಸಂಸ್ಥೆ ಬರುವ ಮೊದಲು ದಕ್ಷಿಣ ಭಾರತೀಯ ಪಾಕಪದ್ಧತಿಗೆ ಹೆಸರುವಾಸಿಯಾಗಿ ಗುಣಮಟ್ಟದ ದಕ್ಷಿಣ ಭಾರತೀಯ ಆಹಾರವನ್ನು ಬಯಸುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಬೆಂಗಳೂರಿನಾದ್ಯಂತ ಪ್ರಸಿದ್ಧ ದರ್ಶಿನಿ ಸಂಸ್ಕೃತಿಯ ಪ್ರವರ್ತಕರಾಗಿದ್ದ ವಾಸುದೇವ ಅಡಿಗರು ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬರುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಶ್ರೀ ಕೆ.ಎನ್. ವಾಸುದೇವ್ ಅಡಿಗ ಮತ್ತು ಅವರ ತಂಡವು ನಿರ್ಮಿಸಿದ ಅದ್ಭುತ ಪರಂಪರೆ, ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದಾಗಿ ಆಹಾರ ಉದ್ಯಮದಲ್ಲಿ ಗುಣಮಟ್ಟದ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದನ್ನು ಕೌಜಿನದ ಸಹ-ಸಂಸ್ಥಾಪಕ ಮತ್ತು ಸಿಒಒ ಮಹೇಶ್ ಮಡಿಯಾಲ ಅವರು ಶ್ಲಾಘಿಸಿದ್ದಾರೆ.“ಭಾರತೀಯ ಫಾಸ್ಟ್-ಫುಡ್ ರೆಸ್ಟೋರೆಂಟ್ಗಳ ಸರಣಿ KaatiZone ಬ್ರ್ಯಾಂಡ್ ಅನ್ನು ಪುನರುಜ್ಜೀವನ ಮಾಡಿದ್ದು ಕೌಜಿನಾಗೆ ಸಿಕ್ಕಿದ ಮೊದಲ ಯಶಸ್ಸು. ಸ್ವಾಧೀನಪಡಿಸಿ ಮತ್ತೆ ಆ ಬ್ರ್ಯಾಂಡ್ ಫೇಮಸ್ ಆಗುವ ಮೂಲಕ ಕೌಜಿನಾ ಗೆಲುವಿನ ತಂತ್ರವನ್ನು ರಚಿಸಿದೆ.
ಈ ಮೂಲಕ ಪ್ರಸಿದ್ಧ ಬ್ರ್ಯಾಂಡ್ಗಳು ಮತ್ತೊಮ್ಮೆ ಬೆಳಗಲು ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಹೊಸ ಸೇರ್ಪಡೆ ವಾಸುದೇವ್ ಅಡಿಗಾಸ್. ವಾಸುದೇವ್ ಅಡಿಗಾಸ್ ರೆಸ್ಟೋರೆಂಟ್ಗಳನ್ನು ಕರ್ನಾಟಕ ಮಾತ್ರವಲ್ಲದೇ ಭಾರತದಾದ್ಯಂತ ಮನೆ ಹೆಸರಾಗಿ ಮರುನಿರ್ಮಾಣ ಮಾಡುತ್ತೇವೆ.KaatiZone ನಂತಹ ಪೌರಾಣಿಕ ಬ್ರ್ಯಾಂಡ್ಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ನಾವು ಅಪಾರವಾದ ಅನುಭವ ಪಡೆದಿದ್ದೇವೆ. ಈ ಯಶಸ್ಸಿನೊಂದಿಗೆ ನಾವು ಈ ಬ್ರ್ಯಾಂಡ್ ಅನ್ನು ಮತ್ತೆ ಜನರ ಮೆಚ್ಚುಗೆಯ ಬ್ರ್ಯಾಂಡ್ ಆಗಿ ರೂಪಿಸಬಹುದು ಎಂಬ ವಿಶ್ವಾಸ ನಮಗಿದೆ” ಎಂದು ಮಹೇಶ್ ಮಡಿಯಾಲ ತಿಳಿಸಿದರು.