ಬೆಂಗಳೂರು: ತಮ್ಮ ಆಪ್ತೆ ಎಂಬ ಹೆಸರಿನಲ್ಲಿ ಚಿನ್ನಾಭರಣದ ಅಂಗಡಿ ಮಾಲೀಕರಿಗೆ ವಂಚನೆಎಸಗುತ್ತಿದ್ದ ಶ್ವೇತಾಗೌಡ ಎಂಬ ಮಹಿಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಇಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.
ಪುಲಕೇಶಿನಗರ ಉಪವಿಭಾಗದ ಎಸಿಪಿ ಅವರ ಮುಂದೆ ವರ್ತೂರ್ ಪ್ರಕಾಶ್ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಶ್ವೇತಾಗೌಡ ತಮಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾದ ಮೂರು ಬ್ರಾಸ್ಲೇಟ್ ಹಾಗೂ ಒಂದು ಉಂಗುರವನ್ನು ಪ್ರಕಾಶ್ ಪೊಲೀಸರಿಗೆ ವಾಪಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.