ಲಯನ್ ಇಂಟರ್ನ್ಯಾಷನಲ್ ವತಿಯಿಂದ ಲಯನ್ಸ್ ಡಯಾಬಿಟಿಸ್ ಅವೇರ್ನೆಸ್ ರನ್ ಎಂಬ ಶೀರ್ಷಿಕೆಯಲ್ಲಿ ಮಧುಮೇಹ ಜಾಗೃತಿ ಓಟ ಕಾರ್ಯಕ್ರಮವನ್ನು ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಜಾಗೃತಿ ಓಟಕ್ಕೆ ಲಯನ್ಸ್ ಗೌರ್ನರ್ ಲಯನ್ ಎನ್ ಮೋಹನ್ ಕುಮಾರ್ ಅವರು ಚಾಲನೆ ನೀಡಿ, ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಿಂದ ದೊಡ್ಡವರ ವರೆಗೆ ಮಧುಮೇಹ ಸಾಮಾನ್ಯವಾಗಿಬಿಟ್ಟಿದೆ.
ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ ಒಂದೆಡೆ ಕಾರಣವಾದರೆ. ಮಧುಮೇಹ ನಿಯಂತ್ರಣ ಮಾಡುವ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಯುವ ಪೀಳಿಗೆಗಳು ಹಾಗೂ ನಾಗರಿಕರು ಮಧುಮೇಹಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಆದ್ದರಿಂದ ಮಧುಮೇಹವನ್ನು ತಡೆಗಟ್ಟುವ ಸಲುವಾಗಿ ಇಂದು ಮಧುಮೇಹ ಜಾಗೃತಿ ಓಟವನ್ನು ಆಯೋಜಿಸಲಾಗಿದೆ ಎಂದರು.
ಈ ಓಟದಲ್ಲಿ ಯುವಕರು, ವೃದ್ಧರು, ಮಹಿಳೆಯರು, ಲಯನ್ಸ್ ಸದಸ್ಯರು ಸೇರಿದಂತೆ ಸ್ಥಳೀಯ ನಾಗರಿಕರು ಭಾಗವಹಿಸಿ ಮಧುಮೇಹದ ಕುರಿತು ಜಾಗೃತಿ ಮೂಡಿಸಿದರು. ಈ ವೇಳೆ ಲಯನ್ ಡಾಕ್ಟರ್ ಕೃಷ್ಣೇಗೌಡ ಎನ್, ಲಯನ್ ಕೆ ದೇವೇಗೌಡ, ಲಯನ್ ಸುರೇಶ್ ರಾಮು, ಮನೋಜ್ ಕುಮಾರ್, ಅಶೋಕ್ ಕುಮಾರ್ ಕುಲಕರ್ಣಿ, ಸೇರಿದಂತೆ ಇತರರು ಭಾಗವಹಿಸಿದ್ದರು.