ವಿಜಯಪುರ: ಪ್ರಜಾಪ್ರಭುತ್ವದ ನಾಲ್ಕನೇ ಮತ್ತು ಕೊನೆಯ ಸ್ತಂಭ. ಪತ್ರಿಕಾ ಮಾಧ್ಯಮವು ವಿವಿಧ ರೂಪಗಳನ್ನು ಒಳಗೊಂಡಿದೆ ಎಂದು ಸಂಸದ ಡಾ. ಸುಧಾಕರ್ ಹೇಳಿದರು.
ದೇವನಹಳ್ಳಿ ತಾಲ್ಲೂಕು ಘಟಕದಿಂದ ಪತ್ರಿಕಾ ದಿನಾಚರಣೆಯನ್ನು ಜುಲೈ 10 ಬುಧವಾರ ಬೆಳಗ್ಗೆ 11 ಗಂಟೆಗೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಪಟ್ಟಣದ ಶ್ರೀ ಗಿರಿಜಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಂತಹ ಸಾಂಪ್ರದಾಯಿಕ ಮುದ್ರಣ ಪ್ರಕಟಣೆಗಳು, ಆನ್ಲೈನ್ ಸುದ್ದಿ ವೆಬ್ಸೈಟ್ಗಳು, ಬ್ಲಾಗ್ಗಳು ಮತ್ತು ಇ-ನಿಯತಕಾಲಿಕೆಗಳಂತಹ ಡಿಜಿಟಲ್ ಪ್ಲಾಟ್ಫಾರ್ಮ್ಗಳು,
ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಪ್ಲಾಟ್ಫಾರ್ಮ್ಗಳ ಮೂಲಕ ಸುದ್ದಿ ಪ್ರಸಾರವಾಗುವ ದೂರದರ್ಶನ ಮತ್ತು ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ಚಾನಲ್ಗಳನ್ನು ಒಳಗೊಂಡ ಪ್ರಸಾರ ಮಾಧ್ಯಮ ಎಂದರು.ಸಂಘದ ಅಧ್ಯಕ್ಷರದ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದ್ರೌಪದಿ ಆದಿಪರಾಶಕ್ತಿ ಮಹಾ ಸಂಸ್ಥನ ಪೀಠದ ಸದ್ಗರು ಆದಿಯೋಗಿ ಶ್ರೀ ಮಂಜುನಾಥ ಸ್ವಾಮೀಜಿಗಳು ವಹಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಉಪಸ್ಥಿತಿಯಲ್ಲಿ ವಿಶೇಷ ಅತಿಥಿಯಾಗಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ ಬಿ.ವಿ. ಅಧ್ಯಕ್ಷ ಲೋಕೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಪ್ರಚಾರ ಸಮಿತಿ ಎಂ.ಪಿ.ಗಿರೀಶ್ ಭಾಗವಹಿಸಿದರು. ವಿಶೇಷ ಆಹ್ವಾನಿತರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಆರ್. ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಶಿವರಾಜ್ ಜಿ.ಚಂದ್ರಣ್ಣ, ತಾಪಂ ಇಒ ಶ್ರೀನಾಥ್ ಗೌಡ, ಸಹಾಕ ನಿರ್ದೇಶಕ ಅಮರನಾರಾಯ ಣಸ್ವಾಮಿ ಮತ್ತಿತರರು ಭಾಗವಸಿದರು.