ವಿಜಯಪುರ: ವಿಜಯಪುರ ಪುರಸಭೆಯ ಅಧ್ಯಕ್ಷೆಯಾಗಿ ಭವ್ಯ ಮಧು, ಹಾಗೂ ಉಪಾಧ್ಯಕ್ಷೆಯಾಗಿ ತಾಜುನ್ನಿಸಾ ಮೆಹಬೂಬ್ ಪಾಷ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ, ದೇವನಹಳ್ಳಿ ತಾಲೂಕು ತಹಶೀಲ್ದಾರ್ ಹೆಚ್.ಬಾಲಕೃಷ್ಣ ಅವರು ಘೋಷಣೆ ಮಾಡಿದರು.ವಿಜಯಪುರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್ ನಿಂದ ವಿಮಲಾ ಬಸವರಾಜ್, ಕಾಂಗ್ರೆಸ್ ನಿಂದ ಭವ್ಯ ಮಧು ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ತಾಜುನ್ನಿಸಾ ಮಹಬೂಬ್ ಪಾಷ, ಕಾಂಗ್ರೆಸ್ ನಿಂದ ಸಲ್ಮಾಖಾನಂ ಅವರು ನಾಮಪತ್ರಗಳು ಸಲ್ಲಿಸಿದ್ದರು.
23 ಮಂದಿ ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಭವ್ಯಮಧು ಅವರಿಗೆ 17 ಮತಗಳು, ವಿಮಲಾಬಸವರಾಜ್ ಅವರಿಗೆ 6 ಮತಗಳು, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ತಾಜುನ್ನಿಸಾ ಮಹಬೂಬ್ ಪಾಷ ಅವರಿಗೆ 19 ಮತಗಳು, ಸಲ್ಮಾಖಾನಂ ಅವರಿಗೆ 4 ಮತಗಳು ಬಂದಿವೆ ಎಂದು ತಿಳಿಸಿದರು.ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಭವ್ಯಮಧು ಅವರಿಗೆ 13 ಮಂದಿ ಜೆ.ಡಿ.ಎಸ್ ಸದಸ್ಯರ ಪೈಕಿ 7 ಮತಗಳು, ಕಾಂಗ್ರೆಸ್ ನ 7 ಮತಗಳು, ಪಕ್ಷೇತರ 2 ಬಿ.ಜೆ.ಪಿಯ 1 ಮತ ಲಬಿಸಿವೆ, ವಿಮಲಾ ಬಸವರಾಜ್ ಅವರಿಗೆ ಜೆ.ಡಿ.ಎಸ್ ನ 6 ಮತಗಳು, ಚಲಾವಣೆಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್ ನಿಂದ ಸ್ಪರ್ಧಿಸಿದ್ದ ತಾಜುನ್ನಿಸಾಮಹಬೂಬ್ ಪಾಷ ಅವರಿಗೆ ಜೆಡಿಎಸ್ನ 13 ಮತಗಳು, ಕಾಂಗ್ರೆಸ್ ನ 4 ಪಕ್ಷೇತರ 1, ಬಿಜೆಪಿ 1, ಕಾಂಗ್ರೆಸ್ ನ ಸಲ್ಮಾಖಾನಂ ಅವರಿಗೆ ಕಾಂಗ್ರೆಸ್ ನಿಂದ 3, ಪಕ್ಷೇತರ-1 ಮತಗಳು ಲಭಿಸಿವೆ.
ಪುರಸಭೆಯ ನೂತನ ಅಧ್ಯಕ್ಷೆ ಭವ್ಯಮಧು ಮಾತನಾಡಿ ಪಟ್ಟಣದ ಅಭಿವೃದ್ಧಿಗಾಗಿ 23 ಜನ ಸದಸ್ಯರುಗಳು ಪಕ್ಷ ಬೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ, ಪಟ್ಟಣದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಅನ್ಯತ ಭಾವಿಸುವುದು ಬೇಡ ಇಲ್ಲಿ ಯಾರ ಪ್ರತಿಷ್ಟೆಯೂ ಇಲ್ಲ, ನಾವೆಲ್ಲಾ ಸದಸ್ಯರು ಒಂದಾಗಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ, ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ವಿಶೇಷ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಮಾತನಾಡಿ, ಪುರಸಭೆಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಯಲ್ಲಿ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾವಣೆ ಮಾಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಆದ್ದರಿಂದ ಎಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ, ನಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದೇವೆ ಎಂದರು.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್-ಬಿಜೆಪಿ-ಕಾಂಗ್ರೆಸ್ ಮೂರು ಪಕ್ಷದ ಸದಸ್ಯರು ಪಟ್ಟಣದ ಅಭಿವೃದ್ಧಿಗಾಗಿ ಒಂದಾಗಿರುವುದು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಲಿದೆ ಇದರಲ್ಲಿ ಯಾವುದೇ ಪ್ರತಿಷ್ಠೆಯಾಗಲಿ ಇಲ್ಲ, ಕೆಲವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ ಎಂದು ಮುಖಂಡ ಚೇತನ್ಕುಮಾರ್ ತಿಳಿಸಿದರು.ನೂತನ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಪಟಾಕಿಗಳು ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು.ಮುಖಂಡರಾದ ಎಂ.ಸತೀಶ್ ಕುಮಾರ್, ಬಿ.ಚೇತನ್ಗೌಡ, ಎ.ಚಿನ್ನಪ್ಪ, ವಿ.ನಂದಕುಮಾರ್, ಸಂಪತ್ ಕುಮಾರ್, ವಿ.ರಾಮಚಂದ್ರಪ್ಪ, ಮಾಜಿ ಪುರಸಭೆ ಸದಸ್ಯಮುನಿಚಿನ್ನಪ್ಪ, ಕೆ.ಎಂ.ಮಧು ಮಹೇಶ್, ಆರ್.ಮುನಿರಾಜು, ಸೊಣ್ಣೇಗೌಡ, ಆರ್.ಎಂ.ಸಿಟಿ ಮಂಜುನಾಥ್, ಸೈಪುಲ್ಲಾ, ಸಜ್ಜದ್, ಮುನಿಕೃಷ್ಣಪ್ಪ, ಪ್ರಕಾಶ್, ಸಂಪತ್ ಕುಮಾರ್, ಮುಂತಾದ ಹಾಜರಿದ್ದರು.ಪುರಸಭಾ ಸದಸ್ಯರಾದ ಎಂ. ಸತೀಶ್ಕುಮಾರ್, ಸಿ.ಎಂ. ರಾಮು, ಎಂ. ಕೇಶವಪ್ಪ, ಸಿ. ನಾರಾಯಣಸ್ವಾಮಿ, ರಾಜೇಶ್ವರಿ ಭಾಸ್ಕರ್, ಆರ್. ಸುಷ್ಮ, ಶ್ರೀರಾಮ, ಎಂ. ರಾಜಣ್ಣ, ಸಿ. ಶಿಲ್ಪ ಅಜಿತ್, ಎನ್. ಮಂಜುಳಾ, ವಿ.ನಂದಕುಮಾರ್, ಆರ್.ಕವಿತಾ, ರಾಧಮ್ಮ, ಎಂ.ಬೈರೇಗೌಡ, ಎ.ಆರ್. ಹನೀಪುಲ್ಲಾ, ರವಿ, ಎಂ. ನಾರಾಯಣಸ್ವಾಮಿ, ಆಯೇಷಾ, ಸೈಯದ್ ಇಕ್ಬಾಲ್ ಉಪಸ್ಥಿತರಿದ್ದರು.