ಬೆಳಗಾವಿ: ವಿಧಾನಸಭಾ ಅಧಿವೇಶನದಲ್ಲಿ ಇಂದು ಬಿವೈ ವಿಜಯೇಂದ್ರ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ನಡುವೆ ತೀವ್ರ ಸ್ವರೂಪದ ವಾಗ್ವಾದ ನಡೆಯಿತು. ತನ್ನ ಮೇಲಿನ ₹ 150 ಕೋಟಿ ಆಮಿಷ ಆರೋಪಕ್ಕೆ ಸಂಂಧಿಸಿದಂತೆ ಸ್ಪಷ್ಟೀಕರಣ ನೀಡಲು ಎದ್ದುನಿಂತ ವಿಜಯೇಂದ್ರ, ಮುಖ್ಯಮಂತ್ರಿಯವರು ರವಿವಾರದಂದು ತನ್ನ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ, ಹಾಗಂತ ತನಗೆ ಅವರ ಮೇಲೆ ಆಕ್ರೋಷವಿಲ್ಲ, ಬದಲಿಗೆ ಅನುಕಂಪ ಹುಟ್ಟುತ್ತಿದೆ, ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಮುಖ್ಯಮಂತ್ರಿಯವರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಬೇರೆಯವರು ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.