ಕನಕಪುರ: ಕಲ್ಲಹಳ್ಳಿ ಶ್ರೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ದಿ ಶ್ರೀ ಕಲ್ಲಹಳ್ಳಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮ ರಥೋತ್ಸವದ ಅಂಗವಾಗಿ ಕಲ್ಲಹಳ್ಳಿ ಗ್ರಾಮವನ್ನು ಜಗಮಗಿಸುವ ವಿದ್ಯುತ್ ದೀಪ ಗಳಿಂದ ಅಲಂಕರಿಸಲಾಗಿತ್ತು,ಬುಧವಾರ ಮುಂಜಾನೆ 2 ಗಂಟೆಯಿಂದಲೇ ದೇವರಿಗೆ ವಿಶೇಷ ಅರ್ಚನೆ ಅಭಿಷೇಕ ಅಲಂಕಾರ ಮಾಡಲಾಗಿತ್ತು ಮಹಾಮಂಗಳರಾತಿ ಬಳಿಕ ಮುಂಜಾನೆ 4 ಗಂಟೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಧ್ಯಾಹ್ನ 12.30 ಕ್ಕೆ ಹೂವುಗಳಿಂದ ಅಲಂಕರಿಸಿದ್ದ ರಥೋತ್ಸವದಲ್ಲಿ ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಬ್ರಹ್ಮ ರಥೋತ್ಸಕ್ಕೆ ಚಾಲನೆ ನೀಡಿಲಾಯಿತು. ರಥೋತ್ಸವನ್ನು ದೇವಾಲಯದ ಸುತ್ತಲು ಪ್ರದಕ್ಷೀಣೆ ಹಾಕಲಾಯಿತು, ನೆರೆದಿದ್ದ ಭಕ್ತರು ವೆಂಕಟರಮಣಸ್ವಾಮಿಗೆ ಜೈಕಾರವನ್ನು ಹಾಕುತ್ತಾ ಹರ್ಷೋದ್ಗಾರ ದಲ್ಲಿ ರಥೊತ್ಸವವನ್ನು ಎಳೆದು ಪುಳಕಿತ ರಾದರು, ಹರಕೆ ಹೊತ್ತಿದ್ದ ಭಕ್ತರು ರಥಕ್ಕೆ ಹಣ್ಣು ದವನ ಎಸೆದು ಹರಕೆ ತೀರಿಸಿದರು.
ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಲ್ಲಹಳ್ಳಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಬೆಂಗಳೂರು,ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ತಾಲೂಕು ಸೇರಿದಂತೆ ನಾನಾ ಭಾಗ ಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಬೇಟಿ ಕೊಟ್ಟಿದ್ದರು, ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು ಭಕ್ತರ ಸಾಲು ಹನುಮಂತನ ಬಾಲದಂತೆ ಬೆಳೆದಿದತ್ತು.
ಹರಕೆ ಹೊತ್ತಿದ್ದ ಭಕ್ತರು ಅರವಟ್ಟಿಗೆ ಸ್ಥಾಪಿಸಿ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ಪ್ರಸಾದವನ್ನ ವಿತರಿಸಿದರು, ದೇವಾಲಯದ ವ್ಯವಸ್ಥಾಪನ ಸಮಿತಿ ಹಾಗೂ ಹರಕೆ ಹೊತ್ತಿದ್ದ ಭಕ್ತರು ಅನ್ನಸಂತರ್ಪಣೆ ಏರ್ಪಡಿಸಿದ್ದರು, ರಾತ್ರಿ10 ಗಂಟೆಯಿಂದ ವಿಶೇಷ ಮುದ್ದುಗುಂಡು ಸುಡುವ ಕಾರ್ಯಕ್ರಮ ನಡೆಯಿತು, ವಿಶೇಷವಾಗಿ ತಾಲೂಕು ವಕೀಲರ ನಾಟಕ ಮಂಡಳಿ ವತಿಯಿಂದ ಧರ್ಮ ರಾಜ್ಯ ಸ್ಥಾಪನೆ, ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.