ದೇವನಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ದರುಕ್ಮಿಣಿ ಸತ್ಯಭಾಮೆ ಸಮೇತ ಶ್ರೀ ವೇಣು ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಪ್ರತಿ ವರ್ಷದಂತೆ ಮಾಘಮಾಸ ದ್ವಿತೀಯ ಮಖಾ
ನಕ್ಷತ್ರದ ಶುಭ ಮುಹೂರ್ತದಲ್ಲಿ ವಿಜೃಂಭಣೆಯಿಂದ ನೆರವೇರಿತು, ಸಾವಿರಾರು ಜನ ಸಾರ್ವಜನಿಕರು, ತಾಲ್ಲೂಕಿನ ಜನಪ್ರತಿನಿಧಿಗಳು ಭಾಗವಹಿಸಿ ಭಕ್ತಿಭಾವದಿಂದ ತೇರನ್ನು ಎಳೆಯಲಾಯಿತು.
ಈ ಸಮಯದಲ್ಲಿ ಸ್ವಾಮಿಯ ಆಭರಣ ಗಳನ್ನು ಪೋಲೀಸರ ಕಾವಲಿನೊಂದಿಗೆ ತಹಸೀಲ್ದಾರ್ ಹೆಚ್. ಬಾಲಕೃಷ್ಣ ತಲೆಯಮೇಲೆ ಹೊತ್ತು ದೇವಾಲಯಕ್ಕೆ ತರಲಾಯಿತು,ಒಡವೆಗಳನ್ನೆಲ್ಲಾ ದೇವರಿಗೆ ತೊಡಿಸಿ ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಿ ರಥೋತ್ಸವದ ತೇರಿನಲ್ಲಿ ಶ್ರೀ ವೇಣುಗೋಪಾಲಸ್ವಾಮಿಯನ್ನು ಪ್ರತಿಷ್ಠಾಪಿಸಿ ಗೋವಿಂದ, ಗೋವಿಂದ ಎಂಬ ನಾಮಸ್ಮರಣೆಯಿಂದ ಪಟ್ಟಣದ ಮುಖ್ಯ ರಸೆಯಲ್ಲಿ ತೇರನ್ನು ಎಳೆದು ತರಲಾಯಿತು ಈ ಸಮಯದಲ್ಲಿ ನೆರೆದಿದ್ದ ಭಕ್ತರು ತೇರಿಗೆ ದವನ ಸಮೇತ ಬಾಳೆಹಣ್ಣನ್ನು ಎಸೆಯುತ್ತಿದ್ದರು, ನಂತರ ತೇರನ್ನು ದೇಶದ ಪೇಟೆ ಚೌಕದಲ್ಲಿ ತಂದು ನಿಲ್ಲಿಸಲಾಯಿತು, ಈ ಸಮಯದಲ್ಲಿ ನೆರೆದಿದ್ದ ಭಕ್ತರು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಿದ್ದರೆ, ಕೆಲವರು ಬಾಳೆಹಣ್ಣು ಕಳಸಕ್ಕೆ ಎಸೆಯುವ ಪ್ರಯತ್ನ ನಡೆಸಿದರು ಸಂಜೆ ತೇರನ್ನು ದೇವಾಲಯದ ಬಳಿ ನಿಲ್ಲಿಸಲಾಯಿತು.
ಈ ಸಮಯದಲ್ಲಿ ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ಪಟ್ಟಣದ ಪ್ರಧಾನ ದೈವ ಶ್ರೀ ವೇಣುಗೋಪಾಲಸ್ವಾಮಿ ಸಕಲರಿಗೂ ಆರೋಗ್ಯ-ಭಾಗ್ಯಗಳನ್ನು ನೀಡಿ ಕಾಪಾಡಲಿ, ಸುತ್ತಮುತ್ತಲಿನ ಜನರು ಆಗಮಿಸುವುದರಿಂದ ಯಾವುದೇ ತೊಂದರೆಯಿಲ್ಲದಂತೆ ನಿರ್ವಿಘ್ನವಾಗಿ ನೆರವೇರಲಿ ಮಳೆ ಬೆಳೆ ಉತ್ತಮವಾಗಿ ಆಗುವಂತಾಗಲಿ ಎಂದರು.
ದೇವಸ್ಥಾನದ ಅಭಿವೃದ್ಧಿಯ ವಿಚಾರವಾಗಿ ಮಾತನಾಡಿ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರ ಸಹಕಾರದೊಂದಿಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಅಭಿವೃದ್ಧಿಯನ್ನು ಮಾಡಲು ಶ್ರಮಿಸಲಾಗುವುದೆಂದರು.
ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ವೇಣುಗೋಪಾಲಸ್ವಾಮಿ ರಥೋತ್ಸವ ಸಮಿತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ರಥಸಪ್ತಮಿಯಿಂದ 9 ದಿನಗಳು ಆಚರಣೆಗೊಂಡ ಕಾರ್ಯಕ್ರಮಗಳಲ್ಲಿ ಪಟ್ಟಣದ ಅಯೋಧ್ಯಾನಗರ ಶಿವಾಚಾರ ನಗರ್ತ ಸಂಘದವರಿಂದ ಕಲ್ಯಾಣೋತ್ಸವ, ಬಿದಲೂರಿನ ಗ್ರಾಮಸ್ಥರಿಂದ ರಥವನ್ನು ಕಟ್ಟುವ ಕೆಲಸವಾದರೇ, ಗೋಕರೆ ಗ್ರಾಮಸ್ಥರು ರಥವನ್ನು ಬಿಚ್ಚುವ ಕೆಲಸ ಮಾಡಲಿದ್ದಾರೆ,
ಭ್ರಹ್ಮರಥೋತ್ಸವದ ಪ್ರಯುಕ್ತ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯಿರುವ ದೊಡ್ಡಿ ಅಪ್ಪಯ್ಯಣ್ಣನವರ ಛತ್ರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಸಮಿತಿಯಿಂದ ಏರ್ಪಡಿಸಲಾಗಿತ್ತು, ಪಟ್ಟಣದ ಚೌಕದ ಮಿತ್ರಕೂಟದಿಂದ ಪಾನಕ, ಮಜ್ಜಿಗೆ, ಹೆಸರುಬೇಳೆ ವಿತರಣೆ ಏರ್ಪಡಿಸಲಾಗಿತ್ತು, ಶುಕ್ರವಾರ ಹಗಲು ಪರಿಷೆಯಿದ್ದು ಹೆಚ್ಚಿನ ಜನ ಆಗಮಿಸುವುದರಿಂದ ಹೆಚ್ಚಿನ ಪೋಲಿಸ್ ಬಂದೋಬಸ್ತು ಏರ್ಪಡಿಸಲಾಗಿದೆ ಎಂದು ಪೋಲಿಸ್ ಇನ್ಸ್ಪೆಕ್ಟರ್ ಧರ್ಮೇಗೌಡ ತಿಳಿಸಿದರು.
ಈ ಸಮಯದಲ್ಲಿ ತಹಸೀಲ್ದಾರ್ ಹೆಚ್.ಬಾಲಕೃಷ್ಣ, ಜಿಲ್ಲಾಡಳಿತ ಕಛೇರಿಯ ಪಿ.ಗಂಗಾಧರ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಬಯಪಾ ಅಧ್ಯಕ್ಷರಾದ ಶಾಂತಕುಮಾರ್, ಸದಸ್ಯ ಪ್ರಸನ್ನಕುಮಾರ್, ರಾಮಚಂದ್ರಪ್ಪ, ಪುರಸಭಾ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ. ರವೀಂದ್ರ, ಸದಸ್ಯರಾದ, ಎನ್.ರಘು, ಗೀತಾ ಶ್ರೀಧರ್,
ಲಕ್ಷ್ಮೀನಾರಾಯಣ್, ವೇಣುಗೋ ಪಾಲ್, ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಆರೋಗ್ಯ ನಿರೀಕ್ಷಕಿ ಶ್ರೀದೇವಿ, ವಸಂತಬಾಬು, ಪ್ರಧಾನ ಅರ್ಚಕರಾದ ಕಣ್ಣನ್ಭಟ್ಟ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.