ನೆಲಮಂಗಲ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದವಾದ, ಗರುಡ ದೇವರಿಗೆ ಶಾಪ ವಿಮೋಚನೆಯಾದ ಸ್ಥಳ ಮಹಿಮಾಪುರ ಮಹಿಮಗಿರಿಯ ಮಹಿಮರಂಗಸ್ವಾಮಿಯ ಬ್ರಹ್ಮ ರಥೋತ್ಸವವು ನೂರಾರು ಗಣ್ಯರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಭ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಜಾತ್ರೆಯ ವಿಶೇಷವಾಗಿ ಮುಂಜಾನೆಯಿದ ಹೋಮ ಹವನೆಗಳು ನೆಡೆದವು ವಿಶೇಷವಾಗಿ ದೇವಾಲಯದ ಸುತ್ತಾ ದೀಪಾಲಂಕಾರ ಹಾಗು ದೇವಾಲಯದ ಒಳಭಾಗದಲ್ಲಿ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ರಥ ಹೊರಡು ಸಮಯಕ್ಕೆ ಭಕ್ತರಿಂದ ಜಯ ಘೋಷ ದಿಂದ ಭಕ್ತಿಯ ಪೂರಕವಾಗಿತ್ತು ಗ್ರಾಮಗಳ ನಾನಾ ಬಾಗಗಳಿಂದ ಬಂದಿದ್ದ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಕಡಲೆಪುರಿ, ಹಲಸಿನ ಹಣ್ಣುಗಳಿಂದ ಮಾಡಿದ ಪ್ರಸಾದ ಹುಣ್ಣು ದವಣ ಅರ್ಪಿಸಿ ಧನ್ಯತೆ ಮೆರೆದರು. ನಂತರ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಮಹಿಮರಂಗಸ್ವಾಮಿ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ದಾಸಪ್ಪನ ಮೂಲಕ ಹೋಲ್ಯ ಪರಾಕ್ ಹಾಕುತ್ತಾ ಆಚರಣೆ ಮಾಡಲಾಯಿತು ಚಿಣ್ಣರು ಹಾಕಿದ ಹೋಲ್ಯ ಪರಾಕ್ ಜಾತ್ರೆಯಲ್ಲಿ ನೇರದಿದ್ದ ಸಾವಿರಾರು ಭಕ್ತರಿಗೆ ಖುಷಿ ತಂದಿತು. ರಥಕ್ಕೆ ಚಾಲನೆ ನೀಡಿದ ನೆಲಮಂಗಲ ತಾಹಸಿಲ್ದಾರ್ ಜೊತೆ ಉಪತಾಹಸಿಲ್ದಾರ್ ನಾರಾಣಸ್ವಾಮಿ, ಶಶಿಧರ್ ಆರ್ ಐ ಮಹೇಶ್ ವಿ ಎ ವಾಸುದೇವ್ ಮಹಿಮರಂಗ ಸ್ವಾಮಿ ಚಾರಿಟಬಲ್ ಟ್ರಸ್ಟ್ ನ ಪದಾದಿಕಾರಿಗಳು, ದೇವಾಲಯದ ಪ್ರಧಾನ ಅರ್ಚಕ ಶ್ಯಾಮ್ ಸುಂದರ್,ಗೋವೇನಹಳ್ಳಿ ಮಲ್ಲಿಕಾರ್ಜುನ್ ಹಾಗೂ ಅರ್ಚಕರ ತಂಡ ಸೇರದಂತೆ ಭಕ್ತಾದಿಗಳು ರಥ ಎಳೆದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಕುಡಿಯುವ ನೀರಿನ ವ್ಯವಸ್ಥೆ ಹಾಗು ಅನ್ನದಾನದ ವ್ಯವಸ್ಥೆಯು ಮಾಡಲಾಗಿತ್ತು.