ಬೆಂಗಳೂರು: ಬೆಂಗಳೂರಿನ ಮಲೇಶ್ವರದ ವಿದ್ಯಾ ಮಂದಿರ ಪಿಯು ಕಾಲೇಜಿನ ವಿದ್ಯಾರ್ಥಿಗಳು 2024-25ರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇರಳದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ “ಗುರುವಾಯೂರಪ್ಪನ್ ಕಥಾ ಮಹಿಮಾ ಚರಿತ್ರೆ”ಯನ್ನು ಅದ್ಬುತ ನೃತ್ಯ ನಾಟಕದ ಮೂಲಕ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಸುಮಾರು 100 ವಿದ್ಯಾರ್ಥಿಗಳು ಗುರುವಾಯೂರಪ್ಪನ್ ಚರಿತ್ರಾ ಕಥಾ ನಾಟಕದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಅದ್ಬುತವಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು, ನಿಜವಾದ ಭಕ್ತಿಯಿಂದ ಗುರುವಾಯೂರಪ್ಪನ್ ಅರ್ಥಾತ್ ಶ್ರೀ ಕೃಷ್ಣನ ಕೃಪೆ ಪಾತ್ರರಾಗ ಬಹುದು ಎಂಬುದನ್ನು ಒಂದೊಂದು ಪಾತ್ರ,ದೃಶ್ಯಗಳ ತುಣುಕುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. ಮಹಾಭಾರತ ಕಥನದ ನಾಟಕ ದೃಶ್ಯಗಳು, ಕೇರಳದ ಕಳಾರಿಪಟು ಸಾಹಸ ನೃತ್ಯ ಪ್ರದರ್ಶನ ಎಲ್ಲ ಮೈನೆವರೇಳುವಂತೆ ಮಾಡಿತು.
ವಿದ್ಯಾಮಂದಿರ ಪಿಯು ಕಾಲೇಜಿನ ಉಪನ್ಯಾಸಕರೇ ಈ ನಾಟಕವನ್ನು ಸಂಪೂರ್ಣವಾಗಿ ನಿರ್ದೇಶನ ನೀಡಿ ಸಂಗೀತ ನೀಡಿದ್ದಾರೆ, ಉಪನ್ಯಾಸಕಿ ಮಂಗಳಾ ಸತೀಶ್ ಗುರುವಾಯೂರಪ್ಪನ ಕಥೆಯ ಪುಸ್ತಕವನ್ನು ನಾಟಕ ರೂಪದಲ್ಲಿ ವೇದಿಕೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ, ಉಪನ್ಯಾಸಕರಾದ ರಾಜಾರಾಮ್, ತ್ರಿಪುರ ಉತ್ತಮ ಸಂಗೀತ ರಚಿಸಿದ್ದಾರೆ.ಜೂನ್ ತಿಂಗಳಿಂದ ಈ ನಾಟಕದ ಪೂರ್ವ ನಡೆಸಲಾಗಿದೆ ಎಂದು ಮಂಗಳಾ ಸತೀಶ್ ತಿಳಿಸಿದರು.
2024-25ರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಶೋಕ್ ಲೈ ಲ್ಯಾಂಡ್ ಕಂಪನಿಯ ಜಿ.ಯೋಗೇಶ್ ಬೋಳಾರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾಮಂದಿರ ಪಿಯು ಕಾಲೇಜಿನ ಕಾರ್ಯದರ್ಶಿ ಬಾಬುದೊರೈಸ್ವಾಮಿ,ಪ್ರಾಂಶುಪಾಲರಾದ ಭಾರತಿ ಬಾಬು ದೊರೈಸ್ವಾಮಿ ಅಧ್ಯಾಪಕರು,ವಿವಿಧ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.