ನೆಲಮಂಗಲ: ಮಕ್ಕಳಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುಲು ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗಲು ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ ಅಭಿಪ್ರಾಯಪಟ್ಟರು.
ನಗರದ ವಾಜರಹಳ್ಳಿ ಮಾರುತಿನಗರದ ಥಾಮಸ್ ಮೆಮೋರಿಯಲ್ ಆಂಗ್ಲ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಮಾತನಾಡಿದ ಅವರು, ಜೀವನದ ಪ್ರತಿ ಸಮಯದಲ್ಲಿಯೂ ವಿಜ್ಞಾನದ ಭಾಗವಾಗಿಯೇ ಬದುಕಬೇಕಾಗಿದೆ ಎಂದರು.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುವ ಒಂದು ಮಾರ್ಗ. ವಿಜ್ಞಾನದ ಹೊರೆತು ಯಾವುದು ಇಲ್ಲ.
ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ವೈಜ್ಞಾನಿಕ ಚಿಂತೆನ ಹೊಂದುವುದರ ಮೂಲಕ ಮೂಢನಂಬಿಕೆ ಹೊಗಲಾಡಿಸಬೇಕು ವಿದ್ಯಾರ್ಥಿಗಳು ವಿಜ್ಞಾನ ಮಹತ್ವ ಹಾಗೂ ಅದರಿಂದ ಬದಲಾವಣೆಗಳನ್ನು ಅರಿಯಬೇಕು ಎಂದು ಹೇಳಿದರು.ಥಾಮಸ್ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಅನೇಕ ಮಾದರಿಗಳನ್ನು ಸಿದ್ಧಪಡಿಸಿ, ಪ್ರದರ್ಶಿಸಿದರು. ಪ್ರದರ್ಶನದಲ್ಲಿ 488 ವಿದ್ಯಾರ್ಥಿಗಳು ಮತ್ತು 400 ಪೋಷಕರು ಭಾಗವಹಿಸಿದ್ದರು. ಸಂದರ್ಭದಲ್ಲಿ ಥಾಮಸ್ ಮೆಮೋರಿಯಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಸಿಸ್ಟರ್ ಜೋಶ್ನಾ ಫ್ರಾನ್ಸಿಸ್ ಆಂಟೊನಿ, ಪುರಸಭೆ ಮಾಜಿ ಅಧ್ಯಕ್ಷರವಿ, ಶಿಕ್ಷಕರಾದ ಹರ್ಷವರ್ಧನ್, ಪ್ರಜ್ವಲ, ಶ್ರೀದೇವಿ, ಪ್ರಭಾವತಿ, ಮೋಹನ್, ಹರ್ಷಿತ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.