ಮೈಸೂರು: ಅಮೆಜಾನ್ ಫ್ಯೂಚರ್ ಇಂಜಿನಿಯರ್ಕಾರ್ಯಕ್ರಮದ ‘ಕೆರಿಯರ್ಸ್ ಆಫ್ ದಿ ಫ್ಯೂಚರ್’ಯೋಜನೆಯ ಮೊದಲ ಆವೃತ್ತಿಯ ಉದ್ಘಾಟನೆ ದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದೆ. ಅಮೆಜಾನ್ ಸಂಸ್ಥೆಯು ಈ ಸಂದರ್ಭದಲ್ಲಿ 2021ನೇ ಇಸವಿಯಲ್ಲಿ ಪ್ರಾರಂಭಿಸಲಾದ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದ ಮೂಲಕಈವರೆಗೆ 3 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಭಾರತದ 8 ರಾಜ್ಯಗಳ 272 ಜಿಲ್ಲೆಗಳಲ್ಲಿ 20,000ಕ್ಕೂ ಹೆಚ್ಚು ಶಿಕ್ಷಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ ಎಂದು ಘೋಷಿಸಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ಅಸಮಾನತೆಯನ್ನು ತೊಡೆಯುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮವು ಪ್ರಾಥಮಿಕವಾಗಿ 2ನೇ ಹಂತದ ನಗರಗಳಲ್ಲಿ ವಾಸಿಸುವ 6 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸುತ್ತದೆ.ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದ ಅಡಿಯಲ್ಲಿ ಅಮೆಜಾನ್ ಸಂಸ್ಥೆಯು ಇಂದು ದೆಹಲಿಯಲ್ಲಿ ಆಯೋಜಿಸಿದ ‘ಕೆರಿಯರ್ಸ್ ಆಫ್ ದಿ ಫ್ಯೂಚರ್’ ಸಮಾವೇಶ 2025 ಕಾರ್ಯಕ್ರಮದಲ್ಲಿ ಸಾರ್ವಜನಿಕ ನೀತಿ ರೂಪಿಸುವ ಪ್ರಮುಖರು ಮತ್ತು ಉದ್ಯಮದ ನಾಯಕರು ಒಟ್ಟುಗೂಡಿ ಕಂಪ್ಯೂಟರ್ ಸೈನ್ಸ್ ಶಿಕ್ಷಣದ ಮಹತ್ವದ ಅಂಶಗಳನ್ನು ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಅವರು, “ಅಮೆಜಾನ್ ನಲ್ಲಿ ಉತ್ತಮ ಶಿಕ್ಷಣದ ಮೂಲಕ ಭಾರತದ ಡಿಜಿಟಲ್ ಕ್ಷೇತ್ರವನ್ನು ಉನ್ನತೀಕರಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮವು ಮಹಿಳಾ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ರೂಪಾಯಿ ಮೌಲ್ಯದ 500 ಮೆರಿಟ್ ಆಧಾರಿತ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ನಾವು ಈಗಾಗಲೇ 3 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು 20,000 ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ ಎಂದು ಹೇಳಿದರು.
ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ತರಬೇತಿ ಉಪಕ್ರಮದ ಭಾಗಿಯಾದ ರಾಜಶ್ರೀ ನಾನಾಸಾಹೇಬ್ ಮಾನೆ “ಅಮೆಜಾನ್ ಫ್ಯೂಚರ್ ಇಂಜಿನಿಯರ್ ಪ್ರೋ ಗ್ರಾಂ ನನ್ನ ವಿದ್ಯಾರ್ಥಿಗಳಿಗೆ ಮತ್ತು ನನಗೆ ಅದ್ಭುತವಾಗಿ ನೆರವಾಗಿದೆ” ಎಂದು ಹೇಳಿದರು.