ಹೊಸಕೋಟೆ: ವಿದ್ಯಾರ್ಥಿಗಳು ಪಠ್ಯಾಭ್ಯಾಸಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಾದ ಕ್ರೀಡಾ, ಸಾಂಸ್ಕøತಿಕ ಮತ್ತು ಇನ್ನಿತರೆ ಕಾರ್ಯಕ್ರಮಗಳಿಗೆ ನೀಡಿದಲ್ಲಿ ಮಾತ್ರ ಶಿಕ್ಷಣ ಪರಿಪೂರ್ಣಗೊಳ್ಳಲಿದೆ. ಇದರಿಂದ ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಂಡು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಲು ಸಹಕಾರಿಯಾಗಲಿದೆ ಎಂದು ಪ್ರಿನ್ಸಿಪಾಲ್ ಪ್ರೊ: ಡೋರೇನ್ ಸ್ನೇಹಲತಾ ಕೋಟ್ಯಾನ್ ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸಲಷ್ಟೇ ಶಿಕ್ಷಣವನ್ನು ಸೀಮಿತಗೊಳಿಸದೆ ಶ್ರದ್ಧೆ ಹಾಗೂ ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ್ದು ಸಹ ಅತ್ಯವಶ್ಯವಾಗಿದ್ದು ಇದರಿಂದ ಮಾತ್ರ ಶಿಕ್ಷಣ ಸಾರ್ಥಕಗೊಳ್ಳಲಿದೆ.
ಪ್ರತಿ ಚಟುವಟಿಕೆ, ಅಭ್ಯಾಸವನ್ನು ಶ್ರದ್ಧೆ, ಭಕ್ತಿಯಿಂದ ನೆರವೇರಿಸಿದಾಗ ಗುರಿ ಸಾಧಿಸಬಹು ದಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಉತ್ತಮ ಕೌಶಲ್ಯವನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.ಇದೇ ಸಂದರ್ಭದಲ್ಲಿ 16ನೇ ದಕ್ಷಿಣ ಭಾರತ ಮಟ್ಟದ ಥ್ರೋಬಾಲ್ ಚಾಂಪಿ
ಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಗಳಿಸಿದ ಅಂತಿಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆರ್. ಕಲ್ಪನಾ ಚಾವ್ಲಾರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಯೋಜಕರಾದ ಡಾ: ಅಶ್ವಥನಾರಾಯಣ್, ಭೌತಶಾಸ್ತ್ರ ವಿಭಾಗದ ಪ್ರೊ: ಕಲಾವತಿ, ಡಾ: ಅರ್ಜುನ್ಗೌಡ, ಎಸ್.ಶ್ರೀನಿವಾಸಚಾರ್, ಸುನಿಲ್ ಕುಮಾರ್, ಡಾ: ಚಲುವರಾಜು, ಡಾ: ವಿಶ್ವೇಶ್ವರಯ್ಯ, ಡಾ: ಕವಲಯ್ಯ ಇನ್ನಿತರರು ಭಾಗವಹಿಸಿದ್ದರು.