ತಿಪಟೂರು: ಪೋಷಕರಿಗೆ, ಗುರು-ಹಿರಿಯರಿಗೆ ವಿದ್ಯಾರ್ಥಿಗಳು ಗೌರವ ನೀಡಿದರೆ ಮತ್ತು ಶಿಸ್ತು, ಸಂಸ್ಕಾರ ಅಳವಡಿಸಿಕೊಂಡಿದ್ದೆ ಆದಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗಲಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಮ್ಮ ಹಿರಿಯರು ಮಾಡಿದ ತ್ಯಾಗ ಬಲಿದಾನಗಳ ಅರಿವು ಇತಿಹಾಸದಿಂದ ಮಾತ್ರ ಅರ್ಥಮಾಡಿಕೊಳ್ಳಬಹುದು ಎಂದು ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಹೊಗವನಘಟ್ಟ ಯೋಗಾನಂದ್ ತಿಳಿಸಿದರು.
ತಾಲೂಕಿನ ಕೆರಗೋಡಿಯ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾ. ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಸಿ ಮಾತನಾಡಿದ ಯೋಗಾನಂದ್ ರವರು, ಪಡೆದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದೆ ಎಂದು ತಿಳಿಸಿದರು.
ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಸಂಘಟನೆಗಳು ನೀಡುವ ಪಠ್ಯ ಪೂರಕಕ್ಕೆ ಅನುಕೂಲವಾಗುವಂತಹ ನೀಡುವ ಸಾಮಗ್ರಿಗಳನ್ನು ಬಳಸಿಕೊಂಡು,ವಿದ್ಯಾಭ್ಯಾಸದ ಕಡೆ ಹೆಚ್ಚು ಮಹತ್ವ ಕೊಟ್ಟು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಈ ಊರಿನಲ್ಲಿ ಪೌರಕಾರ್ಮಿಕರ ಮಕ್ಕಳಿದ್ದು, ತಂದೆಯ ರೀತಿ ಪೌರಕಾರ್ಮಿಕರಾಗಿ ಕೆಲಸ ಮಾಡುವ ಬದಲು ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಹೋಗಿ, ದೊಡ್ಡಮಟ್ಟದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ಗ್ರಾಮಕ್ಕೆ ಮತ್ತು ಪೋಷಕರಿಗೆ ಒಳ್ಳೆ ಹೆಸರು ತರುವ ನಿಟ್ಟಿನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಹಾಲ್ಕುರಿಕೆ ಹೆಚ್.ಎಸ್. ಚಂದ್ರಶೇಖರ್, ಮುಖಂಡರಾದ ಸಂತೋಷ್,ರಂಗಸ್ವಾಮಿ ಸಂಘಟನೆಯ ನಗರ ಕಾರ್ಯದರ್ಶಿ ಲೋಕೇಶ್, ಸಂಚಾಲಕ ರೋಹನ್ ರಾಜ್, ಪತ್ರಕರ್ತ ನಾಗರಾಜ್,ಗ್ರಾಮದ ಪ್ರಭುಸ್ವಾಮಿ,ಪ್ರಸಾದ್, ಜಗದೀಶ್,ದೇವರಾಜ್ ಮತ್ತು ಸಂತೋಷ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.