ಚಿಕ್ಕಬಳ್ಳಾಪುರ: ಆಹಾರ ಮೇಳದಲ್ಲಿ ವಹಿವಾಟು ನಡೆಸುವ ಮೂಲಕ ವಿದ್ಯಾರ್ಥಿಗಳು ಉದ್ಯಮಶೀಲತೆ ಪರಿಜ್ಞಾನವನ್ನ ಪಡೆಯಲಿದ್ದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಸಹಕಾರಿಯಾಗಲಿದೆ. ಬೆಸ್ಟ್ ಡಿಗ್ರಿ ಕಾಲೇಜನಲ್ಲಿ ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ ತಿಳಿಸಿದರು.
ನಗರದ ಶಿಡ್ಲಘಟ್ಟ ರಸ್ತೆ ಯಲ್ಲಿರುವ ಬೆಸ್ಟ್ ಡಿಗ್ರಿ ಕಾಲೇಜನಲ್ಲಿ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಓದುವ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ ಬೆಸ್ಟ್ ಕಾಲೇಜಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಪಠ್ಯೇತರ ಚಟುವಟಿಕೆಗಳು ಆಯೋಜಿಸುತ್ತಿದ್ದು ಶ್ಲಾಘನೀಯ ಆಹಾರ ಮೇಳದಲ್ಲಿ ಮಕ್ಕಳು ತಮ್ಮಿಂದ ತಯಾರಿಸಿದ ವಿವಿಧ ಬಗೆಯ ಆಹಾರ ಪದಾರ್ಥಗಳು ವ್ಯಾಪರ ಮಾಡುತ್ತಿದ್ದು ಅವರಲ್ಲಿ ಉದ್ಯಮಶೀಲತೆ ಪರಿಜ್ಞಾನ ಹೆಚ್ಚುತ್ತೆ ಎಂದರು.
ಬೆಸ್ಟ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಘುನಾಥ್ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಪಠ್ಯೇತರ ಚಟುವಟಿಕೆ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ಕ್ರೀಡಾಕೂಟ,ಆಹಾರ ಮೇಳ,ಎತ್ನಿಕ್ ಡೆ,ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿಲಾಗುತ್ತಿದ್ದು, ಇದರ ಭಾಗವಾಗಿ ಇಂದು ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಇನ್ನು ಗಳಿಸಿದ ಅಂಕಗಳ,ಡಿಗ್ರಿಗಳು ಎಲ್ಲವೂ ಒಂದು ಕಡೆ,ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಅವಕಾಶ ಕಲ್ಪಿಸಬೇಕಾಗಿದೆ.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಅವಕಾಶ ಕಲ್ಪಿಸಿ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೊಕ್ತ ರೀತಿಯ ಸಹಕಾರ ನೀಡಿದಲ್ಲಿ ಒಳ್ಳೆಯ ಪ್ರಜೆಗಳಾಗಿ ಹೊರಹುಮ್ಮುವರು ಎಂದ ಅವರು ಇಂದಿನ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಬಗೆಬಗೆಯ ಆಹಾರ ತಯಾರಿಸಿ ಖುದ್ದಾಗಿ ಮಾರಾಟ ಮಾಡುವ ಮೂಲಕ ವ್ಯವಹಾರದ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪ್ರೊಫೆಸರ್ ಸಂತೋಷ್ ಕುಮಾರ್,ಶಿವಾನಂದ್,ರಾಮಯ್ಯ,ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಆಹಾರ ಮೇಳದಲ್ಲಿ ಕಾಲೇಜಿನ ವಿಧ್ಯಾರ್ಥಿಗಳು ಬಗೆ ಬಗೆಯ ಆಹಾರ ಪದಾರ್ಥಗಳು ತಯಾರಿಸಿ ವ್ಯಾಪಾರ ವಹಿವಾಟು ಮಾಡಿ ವ್ಯವಹಾರದ ಜ್ಞಾನ ಪಡೆದರು.