ಬೆಂಗಳೂರು: ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿರುವ ಮುಖೇಶ್ವರನ್(25) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾ.ರಾ. ಫಾತಿಮಾ ಅವರು ಖಚಿತ ಪಡಿಸಿದ್ದಾರೆ.ಬಂಧಿತ ಆರೋಪಿಯು ಮದ್ಯದ ಅಮಲಿನಲ್ಲಿ ಈ ದುಷ್ಕøತ್ಯವೆಸಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಮೊನ್ನೆ ರಾತ್ರಿ ಕೋರಮಂಗಲದ ಪಬ್ ಒಂದರಲ್ಲಿ ಇದ್ದ ವಿದ್ಯಾರ್ಥಿನಿ ಬಂಧಿತ ಆರೋಪಿಯನ್ನು ತನ್ನ ಮನೆಗೆ ಡ್ರಾಪ್ ನೀಡುವಂತೆ ಕೋರಿದ್ದಳು ಎಂದು ಹೇಳಲಾಗಿದ್ದು, ಆರೋಪಿ ಆಕೆಯ ಮೇಲೆ ಅತ್ಯಾಚಾರಕ್ಕೆ ನಡೆಸಿದ್ದ ಎಂದು ಹೇಳಲಾಗಿತ್ತು.