ಹಿಂದೂ ಪಂಚಾಂಗದ ಪ್ರಕಾರ ಮಾಘ ಶುದ್ಧ ಪಂಚಮಿ ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀ ಪಂಚಮಿಯಂದೂ ಕರೆಯುತ್ತಾರೆ. ಶ್ರೀ ಪಂಚಮಿಯು ವಿದ್ಯೆಯ ದೇವತೆಯಾದ ಸರಸ್ವತಿ ದೇವಿಯು ಅವತರಿಸಿದ ದಿನ ಎಂಬ ನಂಬಿಕೆ ಇದೆ. ಅಂದು ಸರಸ್ವತಿಯನ್ನು ನೆನೆದು ಆಚರಿಸುವ ಹಬ್ಬವಲ್ಲದೇ ವಿದ್ಯಾ ಸರಸ್ವತಿಯನ್ನು ಆರಾಧಿಸಲಾಗುತ್ತದೆ.
ವಸಂತ ಪಂಚಮಿಯ ಹಿನ್ನೆಲೆ ಮಹತ್ವ- ವಸಂತಪಂಚಮಿಯ ಆಚರಣೆಯು ದ್ವಾಪರಯುಗದಲ್ಲೂ ಆಚರಣೆಯಿದ್ದುದು ತಿಳಿಯುತ್ತದೆ. ಭಾಗವತದ ಪ್ರಕಾರ ಗೋವರ್ಧನಗಿರಿಯಲ್ಲಿ ಮಾಘ ಶುದ್ಧ ಪಂಚಮಿಯಂದು ಅದ್ಧೂರಿಯಾಗಿ ವಸಂತ ಪಂಚಮಿ ನಡೆದಿದಿತ್ತು ಎಂಬುದಕ್ಕೆ ಉಲ್ಲೇಖಗಳಿವೆ.ವಿದ್ಯಾಸರಸ್ವತಿಯ ವಸಂತಪಂಚಮಿಹಿಂದೂ ಪಂಚಾಂಗದ ಪ್ರಕಾರ ಮಾಘ ಶುದ್ಧ ಪಂಚಮಿ ವಸಂತಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀ ಪಂಚಮಿಯಂದೂ ಕರೆಯುತ್ತಾರೆ. ಶ್ರೀ ಪಂಚಮಿಯು ವಿದ್ಯೆಯ ದೇವತೆಯಾದ ಸರಸ್ವತಿ ದೇವಿಯು ಅವತರಿಸಿದ ದಿನ ಎಂಬ ನಂಬಿಕೆ ಇದೆ. ಅಂದು ಸರಸ್ವತಿಯನ್ನು ನೆನೆದು ಆಚರಿಸುವ ಹಬ್ಬವಲ್ಲದೇ ವಿದ್ಯಾ ಸರಸ್ವತಿಯನ್ನು ಆರಾಧಿಸಲಾಗುತ್ತದೆ.
ವಸಂತ ಪಂಚಮಿಯ ಹಿನ್ನೆಲೆ ಮಹತ್ವ- ವಸಂತಪಂಚಮಿಯ ಆಚರಣೆಯು ದ್ವಾಪರಯುಗದಲ್ಲೂ ಆಚರಣೆಯಿದ್ದುದು ತಿಳಿಯುತ್ತದೆ. ಭಾಗವತದ ಪ್ರಕಾರ ಗೋವರ್ಧನಗಿರಿಯಲ್ಲಿ ಮಾಘಶುದ್ಧ ಪಂಚಮಿಯಂದು ಅದ್ಧೂರಿಯಾಗಿ ವಸಂತಪಂಚಮಿ ನಡೆದಿದಿತ್ತು ಎಂಬುದಕ್ಕೆ ಉಲ್ಲೇಖಗಳಿವೆ.ವಸ್ತು ಅರ್ಪಿಸಿ ಪೂಜೆಯ ಸಮಯದಲ್ಲಿ “ಶ್ರೀ ಹೃರೀಂ ಸರಸ್ವತ್ಯೈಸ್ವಾಹಾ” ಎನ್ನುವ ಅಸ್ಟಾಕ್ಷರ ಮಂತ್ರದೊಂದಿಗೆ ಶ್ರೀ ಸರಸ್ವತಿಗೆ ಅರ್ಪಿಸಿ ಅಂತಿಮವಾಗಿ ಸರಸ್ವತಿಗೆ ಆರತಿ ಮಾಡಿ ಅವಳನ್ನು ಸ್ತುತಿಸಿ ಮಂತ್ರ ಪಠಣೆಯ ಹೊರತಾಗಿ ಸಂಗೀತ ಸೇವೆ ಮಾಡುವ ಮೂಲಕ ಭಗವತಿಗೆ ಗಂಧ, ಪುಷ್ಪ, ಮೃಷ್ಟಾನ್ನ ಅರ್ಪಿಸಿ ಪುಸ್ತಕ, ಪೆನ್ನು ಸರಸ್ವತಿಯ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಮಾಘಶುದ್ಧ ಪಂಚಮಿಯನ್ನು ಅನಧ್ಯಾಯವೆಂದೂ ಕರೆಯುತ್ತಾರೆ. ಸರಸ್ವತಿಯನ್ನು ಪೂಜಿಸುವಾಗ ಹೆಚ್ಚಿನ ವಸ್ತುಗಳು ಬಿಳಿಬಣ್ಣದವುಗಳಾಗಿರಬೇಕು.
ಹಾಲು, ಮೊಸರು, ಬೆಣ್ಣೆ, ಅಕ್ಕಿ, ಬಿಳಿ ಎಳ್ಳಿನ ಉಂಡೆ, ಕಬ್ಬು, ಕಬ್ಬಿನರಸ, ಮಾಗಿದಬೆಲ್ಲ, ಜೇನುತುಪ್ಪ, ಬಿಳಿಶ್ರೀಗಂಧದ ಮರ, ಬಿಳಿಹೂಗಳು, ಬಿಳಿಉಡುಗೆ, ಖೋವಾ, ಶುಂಠಿ, ಮೂಲಂಗಿ, ಸಕ್ಕರೆ, ಅಕ್ಷತೆ, ಮೋದಕ, ಧೃತ, ಮಾಗಿದಬಾಳೇಹಣ್ಣು, ದ್ವಿದಳಧಾನ್ಯ, ತೆಂಗಿನಕಾಯಿ, ತೆಂಗಿನನೀರು, ಶ್ರೀಫಲ, ಬದರೀಫಲ, ಇತ್ಯಾದಿ ವಸ್ತುಗಳನ್ನು ಪೂಜೆಯಲ್ಲಿ ಬಳಸುತ್ತಾರೆ.
ವಸಂತಪಂಚಮಿಯ ಪ್ರಾಮುಖ್ಯತೆ- ಧರ್ಮಗ್ರಂಥಗಳ ಪ್ರಕಾರ ಶ್ರೀಮನ್ ನಾರಾಯಣನು ವಾಲ್ಮೀಕಿಗೆ ಸರಸ್ವತಿಯ ಮಂತ್ರ ತಿಳಿಸಿದ್ದನು.ಮಹರ್ಷಿ ವಾಲ್ಮೀಕಿ, ವ್ಯಾಸ, ವಶಿಷ್ಟ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳು ಅವರ ಅಧ್ಯಾತ್ಮಿಕ ಅಭ್ಯಾಸದಿಂದ ಸರಸ್ವತಿ ದೇವಿಯನ್ನು ಆಹ್ಲಾದಗೊಳಿಸಿ ವಿಶ್ವವಿಜಯವೆಂಬ ಸರಸ್ವತಿಯ ರಕ್ಷಾಕವಚದ ರಕ್ಷಣೆಯ ವರವನ್ನು ಪಡೆದುಕೊಂಡರು.
ಭಗವತಿ ಸರಸ್ವತಿಯ ಈ ಅದ್ಭುತ ವಿಶ್ವವಿಜಯ ರಕ್ಷಾಕವಚವನ್ನು ಧರಿಸಿ ಮುನಿಗಳು ಸಾಧನೆ ಮಾಡಿದರು. ಸಂಪತ್ತಿನ ಮೂಲವೇ ವಿದ್ಯೆ ಎಂದು ಹೇಳಲಾಗುತ್ತದೆ.
ತಾಯಿ ಸರಸ್ವತಿಯ ಆರಾಧನೆ- ವೇದ, ಪುರಾಣ, ರಾಮಾಯಣ, ಗೀತೆ, ಪಠ್ಯಗಳನ್ನು ಗೌರವಿಸಬೇಕು. ದೇವಿಯ ದೈವಿಕ ವಿಗ್ರಹ ಪವಿತ್ರ ಸ್ಥಳದಲ್ಲಿಟ್ಟು ಪೂಜಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ ಸರಸ್ವತಿಯನ್ನು ಧ್ಯಾನಿಸಬೇಕು. ವಿದ್ಯಾರ್ಥಿಗಳು ವಿಶೇಷವಾಗಿ ಸರಸ್ವತಿಯನ್ನು ಧ್ಯಾನಿಸಬೇಕು.