ಬೆಂಗಳೂರು: 29 ನೇ ಕಾಪ್ ಶೃಂಗ ಸಭೆಯಲ್ಲಿ ಭಾರತವು ಇವಿ ಕಡೆಗಿನ ತನ್ನ ಪಯಾಣವನ್ನು ಜಾಗತಿಕ ವೇದಿಕೆಯ ಮುಂದೆ ಪ್ರಸ್ತುತಪಡಿಸಿತು. ಗ್ಲೋಬಲ್ ಸೌತ್ನಲ್ಲಿ ಭಾರತವು ಇವಿ ಸಾರಿಗೆ ಕ್ಷೇತ್ರದ ಕಡೆಗೆ ಹೊರಳುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಹವಾಮಾನ ಬದಲಾವಣೆಗೆ ಪ್ರೇರಣೆ ನೀಡಬೇಕಾದ ‘ಸಿಒಪಿ 29’ ಶೃಂಗಸಭೆಯು ನಿಧಾನಗತಿಯ ಮಾತುಕತೆ ಮತ್ತು ಕಡಿಮೆ ನಿರೀಕ್ಷೆಗಳಿಂದ ಸೊರಗುತ್ತಿರುವ ನಡುವೆಯೂ ಭಾರತದ ಉಪಕ್ರಮಗಳು ಆಶಾದಾಯಕ ಸಂಗತಿ ಎನಿಸಿತು ಅಜೆರ್ಬೈಜಾನ್ ರಾಜಧಾನಿಯಲ್ಲಿ ಇತ್ತೀಚೆಗೆ ಹವಾಮಾಣ ಬದಲಾವಣೆ ಕುರಿತ ಚರ್ಚಗಾಗಿ ಸದಸ್ಯ ರಾಷ್ಟ್ರಗಳ `ಕಾಪ್ 29’ ಶೃಂಗಸಭೆಯ ನಡೆಯಿತು. ಅಲ್ಲಿನ `ವಿ ಮೀನ್ ಬಿಸಿನೆಸ್ ಪೆವಿಲಿಯನ್ನಲ್ಲಿ ನಡೆದ “ಇಂಡಿಯಾಸ್ ಎಲೆಕ್ಟ್ರಿಕ್ ಮೊಬಿಲಿಟಿ ಲೀಡರ್ಶಿಪ್ : ಸ್ಪಾಟ್ಲೈಟಿಂಗ್ ಇವಿ ಟ್ರಾನ್ಸಿಷನ್ ಪಾಥ್ವೇಸ್ ಫಾರ್ ದ ಗ್ಲೋಬಲ್ ಸೌತ್” ಎಂಬ ಗೋಷ್ಠಿಯಲ್ಲಿ ಭಾರತದ ಸುಸ್ಥಿರ ಸಾರಿಗೆ ಹವಾಮಾನ ಬದಲಾವಣೆಯಲ್ಲಿ ಭಾರತದ ನೀತಿಗಳು, ಉಪಕ್ರಮಗಳು ಹಾಗೂ ಸಹಭಾಗಿತ್ವವನ್ನು ವಿವರಿಸಲಾಯಿತು.
“ಕ್ಷಿಪ್ರವಾಗಿ ನಡೆಯುತ್ತಿರವ ಇವಿ ಪರಿವರ್ತನೆ ಯೋಜನೆಗಳನ್ನು ಹೆಚ್ಚಿಸುವ ಗುರಿಯನ್ನು ನಮ್ಮ ರಾಜ್ಯದ ನೀತಿಗಳು ಹೊಂದಿವೆ. ತೆಲಂಗಾಣವು ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಹೆಮ್ಮೆಯಾಗುತ್ತಿದೆ” ಎಂದು ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಟೋಮೋಟಿವ್ ಮತ್ತು ಇವಿ ನಿರ್ದೇಶಕ ಗೋಪಾಲಕೃಷ್ಣನ್ ವಿಸಿ ಅಭಿಪ್ರಾಯ ಪಟ್ಟರು.
ಭಾರತದ ವಿದ್ಯುತ್ ಚಾಲಿತ ಸಾರಿಗೆ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸುಸ್ಥಿರ ಮತ್ತು ಅಂತರ್ಗತ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಹೇಳಿದರು.ಇದೇ ಸಂದರ್ಭದಲ್ಲಿ ಜೆಎಸ್ಡಬ್ಲ್ಯು ಗ್ರೂಪ್ನ ಉಪಾಧ್ಯಕ್ಷ ಸ್ವರೂಪ್ ಬ್ಯಾನರ್ಜಿ, ಕಾರ್ಯತಂತ್ರ ಮುಖ್ಯಸ್ಥ ಸಂಜೀವ್ ಗೋಪಾಲ್ ಮತ್ತಿತರು ಹಾಜರಿದ್ದರು.