ತಿ. ನರಸೀಪುರ: ವಿದ್ಯುತ್ ಸ್ಪರ್ಶದಿಂದ 80 ಸಾವಿರ ರೂ ಗಳು ಬೆಲೆಬಾಳುವ ಹಸು ಒಂದು ಸಾವನ್ನಪ್ಪಿರುವ ಘಟನೆ ಬೂದಳ್ಳಿ ಉಕ್ಕುಲಗೆರೆ ರಸ್ತೆಯ ಸಮೀಪ ಖಾಸಗಿ ಜಮೀನಿನಲ್ಲಿ ಸಂಭವಿಸಿದೆ.
ಜಮೀನು ಮಾಲೀಕ ಮತ್ತು ಚೆಸ್ಕಾಂ ಇಲಾಖೆಯ ಅವರ ನಿರ್ಲಕ್ಷದಿಂದ ಹಸು ಸಾವನಪ್ಪಿದ್ದು ಹಸು ಮಾಲಿಕನಿಗೂ ವಿದ್ಯುತ್ ಶಾಕ್ ತಗಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಗೆ ಕಾರಣವಾಗಿರುವ ಜಮೀನು ಮಾಲಿಕ ಮತ್ತು ಚೆಸ್ಕಾಂ ಇಲಾಖೆಯವರು ಜವರಪ್ಪನ ಮನೆಗೆ ಆಧಾರವಾಗಿದ್ದ ಸತ್ತ ಹಸುವಿಗೆ ಸೂಕ್ತ ಪರಿಹಾರ ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹೇಶನಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು.ಸಂಬಂಧಪಟ್ಟ ಇಲಾಖೆಯವರು ಸ್ಪಂದಿಸದೆ ಇದ್ದರೆ ಚೆಸ್ಕಾಂ ಇಲಾಖೆ ವಿರುದ್ಧ ಇಲಾಖೆ ಮುಂಬಾಗ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಶಂಕರ್ ಎಚ್ಚರಿಕೆ ನೀಡಿದರು.