ಬೆಂಗಳೂರು: ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಹಾಗೂ ಶ್ರೀ ರಾಮ ಮಂಡಳಿ ಸಂಯುಕ್ತಾಶ್ರಯದಲ್ಲಿ ಈಸ್ಟ್ ಎಂಡ್ ರಾಮ ಮಂದಿರದಲ್ಲಿ ಇತ್ತೀಚೆಗೆ ಒಕ್ಕೂಟದ ಗೌರವಾಧ್ಯಕ್ಷರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ ಎಸ್ ಮೋಹನ ಕುಮಾರ ರವರ ಗಾಯನ ಕಛೇರಿ ನಡೆಯಿತು.
ಶ್ರೀಯುತರು ಅಠ್ಠತಾಳದ ಕಾನಡ ರಾಗದ ವರ್ಣ ದೊಂದಿಗೆ ಪ್ರಾರಂಭಿಸಿದ ಕಛೇರಿ ಹಂಸಧ್ವನಿ ರಾಗದ ಮುತ್ತ ಯ್ಯ ಭಾಗವತರ ಗಂಗಣಪತೆ ಮಾಯಮಾಳವಗೌಳ ರಾಗದ ತುಳಸೀದಳ ದೇವಮನೋಹರಿ ರಾಗದ ಪಲುಕವದೇಮಿರಾ ಕೃತಿಯ ಮೂಲಕ ಸಭಿಕರ ಮನ ಗೆದ್ದರು ಅಂದಿನ ಮುಖ್ಯ ರಾಗ ಶುಭಪಂತುವರಾಳಿ ರಾಗಾಲಾಪನೆ ಮುತ್ತಯ್ಯ ಭಾಗವತರ ರಚನೆ ಮನೋನ್ಮಣಿ ಕೃತಿಯ ತನುಧನ ಮನವ ತವಕದಿ ನೀಡಿ ಚರಣ ಭಾಗದ ನೆರವಲ್ ಹಾಗೂ ವಿಸ್ತಾರವಾದ ಸ್ವರ ಕಲ್ಪನೆ ಸಭಿಕರ ಕರತಾಡನಕ್ಕೆ ಸಾಕ್ಷಿಯಾಯಿತು.
ಲೋಕ ಪ್ರಿಯ ಮೃದಂಗ ಹಿರಿಯ ವಿದ್ವಾಂಸರಾದ ಸುಬ್ರಹ್ಮಣ್ಯ ಮೋಹಿತೆಯವರು ಖಂಜಿರ ರಾಹುಲ್ ಬೆಟ್ಟ ವೆಂಕಟೇಶ್ ಮೋರ್ಚಿಂಗ್ ತನಿ ಆವರ್ತನ ತುಂಬಾ ಸೊಗಸಾಗಿ ಮೂಡಿ ಬಂತು ಪಿಟೀಲಿನಲ್ಲಿ ಹಿರಿಯ ವಿದ್ವಾಂಸರಾದ ಬಿ.ಎಸ್. ನಾಗರಾಜ್ ಉತ್ತಮವಾಗಿ ಸಹಕರಿಸಿದರು ಶ್ರೀ ರಾಮ ಮಂಡಳಿಯ ಅಧ್ಯಕ್ಷರಾದ ಯೋಗ ನರಸಿಂಹಸ್ವಾಮಿ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಿ ಅನಂತ ನಾರಾಯಣ ಸರ್ವ ಸದಸ್ಯರು ದಕ್ಷಿಣ ವಲಯ ಒಕ್ಕೂಟದ ಸಂಚಾಲಕರಾದ ವಿದುಷಿ ಶ್ರೀಮತಿ ಪ್ರಿಯಾ ಗಣೇಶ್ ವಿದ್ವಾನ್ ಡಾ ಶ್ರೀನಿವಾಸ ಮೂರ್ತಿ ವಿದ್ವಾನ್ ಬೆಟ್ಟ ವೆಂಕಟೇಶ್ ಶ್ರೀಮತಿ ಸರಸ್ವತಿ ಹಾಗೂ ಶ್ರೀಮತಿ ಲಕ್ಷ್ಮಿದೇವಿ ಮೋಹನ ಕುಮಾರ ಉಪಸ್ಥಿತರಿದ್ದರು.