ಬೆಂಗಳೂರು: ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು.ಇಂದು ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ. ಖಾದರ್ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.
ಅಗಲಿದ ಗಣ್ಯರಾದ ಚಾಮರಾಜನಗರ ಕ್ಷೇತ್ರದ ಸಂಸದರಾಗಿದ್ದ ವಿ. ಶ್ರೀನಿವಾಸ್ ಪ್ರಸಾದ್, ಮಾಜಿ ಸಂಸದ ಸಿ.ಪಿ.ಮುಡಲಗಿರಿಯಪ್ಪ, ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದ ನಾಗಮ್ಮ ಕೇಶವಮೂರ್ತಿ, ಎಂ.ಪಿ.ಕೇಶವಮೂರ್ತಿ,ಕೆ. ವಸಂತ ಬಂಗೇರ, ಡಾ. ಪಾಟೀಲ ಬಸನಗೌಡ ಗುರುನಗೌಡ, ನಾಗರೆಡ್ಡಿ ಪಾಟೀಲ್, ರಮೇಶ್ ಕುಮಾರ್ಪಾಂಡೆ, ಟಿ.ಎಚ್.ಶಿವಶಂಕರಪ್ಪ, ವಾಸು, ಧರ್ಮಗುರು ಖಾಜಿಯಾ ಅಫ್ಜಲ್ ಫಯಜ್ ಕೋಯಮ್ಮ, ಸಾಹಿತಿ ಕಮಲಾ ಹಂಪನಾ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ನಿರೂಪಕಿ ಅಪರ್ಣ ಸೇರಿದಂತೆ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು.