ವಿಧಾನಸೌಧ: ನಾಡದೇವತೆ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚಣೆ ಮಾಡುವ ಮೂಲಕ ಯಲಹಂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ-ಸದಸ್ಯರು ಗೌರವ ಸಮರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನ ಸೌಧ ಮುಂಗಾದಲ್ಲಿ ಪ್ರತಿಷ್ಠಾಪಿಸಿದ ನಾಡದೇವತೆ ಭುವನೇಶ್ವರಿ ಪ್ರತಿಮೆಗೆ ಸ್ಥಾಪನೆಗೆ ತಳಭಾಗದ ಪೀಠದ ಸ್ಟಕ್ಚರಲ್ ವಿನ್ಯಾಸ ಮಾಡಿದ ಮಧುಮತಿ ಅವರಿಗೆ ಯಲಹಂಕ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ನಾಡದೇವತೆ ಭುವನೇಶ್ವರಿ ಪ್ರತಿಮೆ ತಳಭಾಗದ ಪೀಠದ ವಿನ್ಯಾಸಕಿ ಮಧುಮತಿ ಅವರನ್ನುಯಲಹಂಕ ವಿಧಾಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಸ್ ಹರೀಶ್, ಕಾರ್ಯದರ್ಶಿಗಳಾದ ಪ್ರಭಾಕರ್, ಡಾ ರಮೇಶ್ ಅವರು ಸಾಲು ಹೊದೆಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಧುಮತಿ ಅವರು ನಾಡದೇವತೆ ಭುವನೇಶ್ವರಿ ಪ್ರತಿಮೆ ಹಾಗೂ ಕರ್ನಾಟಕದ ಭೂಪಟ ಒಟ್ಟು 35 ಟನ್ ತೂಕ ಹೊಂದಿದ್ದು ಅದಕ್ಕೆ ತಕ್ಕಂತೆ ತಳಭಾಗದ ಪೀಠ ವಿನ್ಯಾಸಗೊಳಿಸಲಾಗಿದೆ ಎಂದರು.ಅಧ್ಯಕ್ಷ ಡಾ ಎಸ್. ಹರೀಶ್ ಮಾತನಾಡಿ ವಿಧಾನಸೌಧ ಮುಂಭಾಗದಲ್ಲಿ ನಾಡದೇವತೆ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾನೆ ಮಾಡಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ಸದಸ್ಯರಾದ ಮಧುಸೂದನ ಹಾಜರಿದ್ದರು.