ನವದೆಹಲಿ: ಕ್ರೀಡಾ ಮಂಡಳಿಯಲ್ಲಿ ಭಾರತದ ಅಥ್ಲೀಟ್ ವಿನೇಶ್ ಫೋಗಟ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಕಾಲತ್ತು ವಹಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಿಂದ ನರ್ಹತೆಗೊಳಿಸಿದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಪ್ರಶ್ನಿಸಿ ವಿನೇಶ್ ಫೋಗಟ್ ಅವರು ಕ್ರೀಡಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಗುರುವಾರ ರಾತ್ರಿ ಭಾರತೀಯ ಕಾಲಮಾನ 9.30ರ ಒಳಗಾಗಿ ವಕೀಲರನ್ನು ನೇಮಕ ಮಾಡಬೇಕು ಎಂದು ಕ್ರೀಡಾ ಸಮಿತಿ ಸೂಚಿಸಿತ್ತು. ಫೋಗಟ್ ಪರ ವಾದ ಮಂಡಿಸಲು ಹರೀಶ್ ಸಾಳ್ವೆ ಒಪ್ಪಿಕೊಂಡಿದ್ದಾರೆ.
ಶುಕ್ರವಾರ ಪ್ಯಾರಿಸ್ ಸಮಯ ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30) ವಿಚಾರಣೆ ನಡೆಯಲಿದ್ದು, ಹರೀಶ್ ಸಾಳ್ವೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 4 ವಕೀಲರು ಪ್ಯಾರಿಸ್ನಲ್ಲಿ ಇರಲಿದ್ದಾರೆ.