ವಿನೋದ್ ಕಾಂಬ್ಳಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದು 1991 ರಲ್ಲಿ. ಅಂದಿನಿಂದ 2000ರವರೆಗೆ ಭಾರತದ ಪರ ಒಟ್ಟು 121 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಟೆಸ್ಟ್ನಲ್ಲಿ 21 ಇನಿಂಗ್ಸ್ ಆಡಿರುವ ಅವರು 2 ಡಬಲ್ ಸೆಂಚುರಿ ಹಾಗೂ 4 ಸೆಂಚುರಿಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 97 ಇನಿಂಗ್ಸ್ಗಳಿಂದ 2477 ರನ್ ಬಾರಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ಬಾರಿ ಚಿಕಿತ್ಸೆ ಪಡೆದರೂ ಅವರು ಮತ್ತೆ ಮತ್ತೆ ಅನಾರೋಗ್ಯಕ್ಕೀಡಾಗಿದ್ದರು. ಇದಕ್ಕೆ ಕಾರಣ ಅವರ ಕುಡಿತದ ಚಟ ಎಂದು ವರದಿಗಳಾಗಿದ್ದವು. ಆದರೀಗ ಪದೇ ಪದೇ ಅವರ ಆರೋಗ್ಯ ಸ್ಥಿತಿ ಹದಗೆಡಲು ಬ್ರೈನ್ ಕ್ಲೋಟ್ ಕಾರಣ ಎನ್ನಲಾಗಿದೆ. ಅಂದರೆ ವಿನೋದ್ ಕಾಂಬ್ಳಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.