ಫೇಸ್ಬುಕ್ನ ವಿಶೇಷ “ವಿಪ್ರ ಬಳಗ”ದ ಎರಡನೇ ವಾರ್ಷಿಕೋವವನ್ನು ಸಂಭ್ರಮ ಮತ್ತು ವಿಜೃಂಭಣೆಯಿಂದ ನಗರದ ಬಬ್ಬೂರುಕಮ್ಮೆ ಸಭಾಂಗಣ, ಶೇಷಾದ್ರಿಪುರಂನಲ್ಲಿ ನಡೆಯಿತು. 5700 ಜನಗಳಿರುವ ಪೇಸ್ಬುಕ್ ಗುಂಪಿಗೆ ಸೆಪ್ಟೆಂಬರ್ ಕೊನೆಯವಾರಕ್ಕೆ 2 ವರ್ಷ ತುಂಬಿದ್ದು ಡಿಸೆಂಬರ್ ಎಂಟರಂದು ವಾರ್ಷಿಕೋತ್ಸವವನ್ನು ಆಚರಿಸಕೊಳ್ಳಲಾಯಿತು.
ಗುಂಪಿನ ಸಂಸ್ಥಾಪಕರು ಮತ್ತು admin ಶ್ರೀಮತಿ ಪದ್ಮ ಅನಂತ ಭಾರದ್ವಾಜ್ ರವರು ಯಶಸ್ವಿಯಾಗಿ ಎರಡು ವರ್ಷಗಳಿಂದ ಗುಂಪನ್ನು ಉತ್ತಮ ರೀತಿಯಿಂದ ಮುನ್ನಡೆಸುತ್ತಿದ್ದು, ವಿಪ್ರರ ಏಳಿಗೆ ಒಗ್ಗಟ್ಟು ಮತ್ತು ಸಮಾಜದಲ್ಲಿ ಬ್ರಾಹ್ಮಣರ ಹೆಮ್ಮೆಯನ್ನು ಉಳಿಸುವ ಉದ್ದೇಶದಿಂದ ಉತ್ತಮ ಸಂಘಟಕಿಯಾಗಿ ಕಾರ್ಯಗಳನ್ನು, ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವ ಪದ್ಮ ಅವರು ಬ್ರಾಹ್ಮಣ ಸಮಾಜದ ಜನರನ್ನು ಒಗ್ಗೂಡಿಸಿ ಅವರಿಗೆ ವಿವಿಧ ರೀತಿಯಲ್ಲಿ ಸಹಾಯವಾಗುವ ರೀತಿಯಲ್ಲಿ ಅನೇಕ ಕಾರ್ಯಗಳಲ್ಲಿ ತೊಡಗಿದ್ದಾರೆ. ”
ವಿಪ್ರ ಬಳಗ” ಕೇವಲ ಒಂದು ಗುಂಪಾಗಿ ಇರದೇ ಒಂದು ಕುಟುಂಬದ ರೀತಿಯಲ್ಲಿ ಬಾಂಧವ್ಯ ಬೆಳೆಸಿಕೊಂಡಿದೆ. ತ್ರಿಮತಸ್ಥ ವಿಪ್ರರು ಒಂದು ಕುಟುಂಬದಂತಿರುವ ವಿಶೇಷ ಗುಂಪಾಗಿದೆ.”ವಿಪ್ರ ಸಂಭ್ರಮ”ದ ಎರಡನೇ ವಾರ್ಷಿಕೋತ್ಸವವು ವಿಶೇಷವಾದ ಕಾರ್ಯಕ್ರಮವಾಗಿದ್ದು ರಾಜ್ಯದ ಅನೇಕ ಮೂಲೆಗಳಿಂದ 190-200 ಜನ ಸದಸ್ಯರು ಕಾರ್ಯಕ್ರಮಕ್ಕೆಂದೇ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಎವಿ ಪ್ರಸನ್ನರವರು ಬಂದು ತಮ್ಮ ಶ್ರೀಮತಿಯವರ ಗಮಕ ವಾಚನಕ್ಕೆ ವಾಖ್ಯಾನ ಮಾಡಿ ಆಧ್ಯಾತ್ಮಿಕ ಅನುಭೂತಿಯನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರಾಜೇಶ್ವರಿ ಮೂರ್ತಿ ಮತ್ತು ಶ್ರೀಮತಿ ಲತಾ ಸಚ್ಚಿದಾನಂದಮೂರ್ತಿಯವರು ಮಾಡಿದರು.ಕಾರ್ಯಕ್ರಮದ ಆರಂಭವು ದೀಪ ಪ್ರಜ್ವಲನೆಯ ಮೂಲಕ ಆರಂಭವಾಗಿ ಅಧ್ಯಕ್ಷರ ಪರಿಚಯವನ್ನು ಶ್ರೀಮತಿ ನಂದಿನಿ ಶ್ರೀನಾಥ್ರವರು ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವೆಂಕಟೇಶ ಮೂರ್ತಿಯವರು ಮಾಡಿ ಕೊಟ್ಟರು.
ಶೃಈ ಸಚ್ಚಿದಾನಂದ ಮೂರ್ತಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಂತಹ ವಿಪ್ರಬಳಗದಲ್ಲಿ ಇಷ್ಟು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಸೇರಿರುವುದು ಸಂಭ್ರಮದ ವಿಷಯ ಕೇವಲ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಲ್ಲದೇ ಜೊತೆಗೆ ಸರಕಾರದಿಂದ ಸಿಗುವ ಸೌಕರ್ಯಗಳ ಉಪಯೋಗ ಪಡೆಯಬೇಕು. ಈಗ ಮಾಡುತ್ತಿರುವ ಕಾರ್ಯಗಳಿಗಿಂತಲೂ ಹೆಚ್ಚಿನ ಕಾರ್ಯಗಳನ್ನು ಮಾಡಿ ಜನರಿಗೆ ಸಹಾಯಕರಾಗಬೇಕು ಎಂದು ಹೇಳಿದರು.
ಇಂದಿನ ಆಧುನಿಕ ವಿಚಾರ ಮತ್ತು ನಮ್ಮ ಸಂಪ್ರದಾಯಗಳನ್ನು ಬಿಟ್ಟು ಹಾನಿಗೆ ಒಳಗಾಗದೇ ಶ್ರಾದ್ಧ ಮಾಡದೇ ಅನಾಥಾಶ್ರಮಕ್ಕೆ ಊಟ ಕೊಡುತ್ತೇವೆ ಎನ್ನದೇ ಅನಾಥಾಶ್ರಮಕ್ಕೆ ಊಟ ಕೊಡುವ ಜೊತೆಗೆ ಶ್ರಾದ್ಧವನ್ನು ಮಾಡಬೇಕು. ಮಕ್ಕಳಿಗೆ ತಮ್ಮ ಬಂಧು ಬಾಂಧವರ ಪರಿಚಯವನ್ನು ಮಾಡಿಸಿ ಕೊಡಬೇಕು. ಇದರಿಂದ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾದ ಎವಿ ಪ್ರಸನ್ನರವರು ಮಾತನಾಡಿ ವಿಪ್ರರ ಜನ ಸಂಖ್ಯೆ ಇಳಿಮುಖವಾಗುತ್ತಿರುವುದರ ಅಂಕಿ ಸಂಖ್ಯೆಗಳನ್ನು ಹೇಳಿ ಪ್ರತಿ ಮನೆಯಲ್ಲಿ ಕನಿಷ್ಠ ಇಬ್ಬರು ಮಕ್ಕಳು ಆಗುವಂತೆ ನೋಡಿಕೊಂಡು ಬ್ರಾಹ್ಮಣರ ಸಂಖ್ಯೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂಧು ಹೇಳಿದರು. ನಂತರ 70-80 ನಿಮಿಷ ಗಮಕ ವಾಚನ ಹಾಗೂ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದಲ್ಲಿ ಕೀಚಕ ವಧೆಯ ಮೊದಲು ದ್ರೌಪದಿ ಮತ್ತು ಭೀಮಸೇನನ ಸಂಭಾಷಣೆಯನ್ನು ರಸವತ್ತಾಗಿ ವ್ಯಾಖ್ಯಾನಿಸಿದರು.
ಗುಂಪಿನ ಹಿರಿಯ ದಂಪತಿಗಳಾದ ಶ್ರೀ ಜಯರಾಮ ಮತ್ತು ಶ್ರೀಮತಿ ಉಷಾ ಜಯರಾಮ ಅವರಿಗೆ ಸನ್ಮಾನ ಮಾಡಲಾಯಿತು.ಭೋಜನದ ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಂತ್ ಹಾಗೂ ಪ್ರಭಾವತಿಯವರ ಕೈರೋಕೆ ಗಾಯನ, ದೀಪ್ತಿಯವರಿಂದ ಚಲನ ಚಿತ್ರ ಗೀತೆ ಗಾಯನ, ಶುಭಾ ಕೃಪೇಶ್ ತಂಡದವರಿಂದ ಜನಪದ ನೃತ್ಯ ಸುಮಂಗಲಿ ಆಚಾರ್ಯರವರಿಂದ ತುಳುನಾಡಿನ ವರ್ಣನೆಯ ನೃತ್ಯ, ಪದ್ಮಾ ಅನಂತ್ ಭಾರದ್ವಾಜ್ ತಂಡದಿಂದ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕಿರುನಾಟಕ, ಗೀತಾಮಣಿಯವರಿಂದ ಭಕ್ತಿ ಗೀತೆಗೆ ನೃತ್ಯ, ಪೂರ್ಣಿಮ ರವರಿಂದ ಜನಪದ ನೃತ್ಯ, ಪ್ರಸನ್ನ ರವರಿಂದ ಮ್ಯಾಡೋಲಿನ್ ವಾದನ,
ಸತ್ಯ ಮಲ್ನಾಡ್ ತಂಡದವರಿಂದ ವರಿಂದ ಕಿರುನಾಟಕ, ಸುಮ ಮತ್ತು ಚಂದ್ರಶೇಖರ್ ದಂಪತಿಗಳಿಂದ ರೇಟ್ರೂ ಡ್ಯಾನ್ಸ್ , ಪುಟಾಣಿ ರಾಘವ ದತ್ತರಿಂದ ಕೀಬೋರ್ಡ್ ವಾದನ, ಕಾತ್ಯಾಯಿನಿ ಪ್ರಸಾದ್ರವರಿಂದ ಚಲನಚಿತ್ರ ಗೀತೆ, ಗೀತಾಮಣಿ ತಂಡದಿಂಧ ಕಿರು ನಾಟಕ, ಸುಧಾ ಸೋಮೇಶ್ ರವರಿಂದ ನೃತ್ಯ, ಗುರುರಾಜರಾವ್ ರವರಿಂದ ಇಂಪಾದ ಹಳೇ ಹಿಂದಿ ಚಲನ ಚಿತ್ರಗೀತೆಗಳ ಗಾಯನ, ಕನ್ನಡ ನಾಡಿನ ಬಗ್ಗೆ ಶುಭಾ ಕೃಪೇಶ್ ತಂಡದವರಿಂದ ನೃತ್ಯ, ಸರು ಅಮರ್ ರವರಿಂದ ಇಂಪಾದ ಗಾಯನ, ಮೋಹನ್ ಗಿರಿಪುರರವರಿಂದ ಹಳೇಯ ಚಲನಚಿತ್ರ ಗೀತೆಗೆ ಗಾಯನ, ಸುಮತಿ ಸುಬ್ರಹ್ಮಣ್ಯ ರವರಿಂದ ಶಿವಸ್ತುತಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಫೇಸ್ಬುಕ್ ಗುಂಪಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಕೂಡ ಮಾಡಲಾಯಿತು.
ಕವನ, ಚುಟುಕು, ಲೇಖನ, ಚಿತ್ರಕ್ಕೊಂದು ಕವನ ಮತ್ತು ಭಕ್ತಿ ಗೀತೆಗಳ ಸ್ಪರ್ಧೆಯನ್ನು ಹಮ್ಮಿ ಕೊಳ್ಳಲಾಗಿದ್ದು ವಿಜೇತರಾದ ಸುಮಾರು 50-60 ಜನರಿಗೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರಮಿಸಿದ, ಧನ ಸಹಾಯ ಮಾಡಿದ , ವಿಶೇಷ ಆಹ್ವಾನಿತರಾಗಿ ಬಂದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ ಎಲ್ಲರಿಗೂ ಸನ್ಮಾನಿಸಲಾಯಿತು. ಮುಂಜಾನೆ ಉಪಹಾರದಿಂದ ಆರಂಭವಾದ ಕಾರ್ಯಕ್ರಮ ಸಂಜೆ ಕಾಫಿ ಲಘು ಉಪಹಾರದಿಂದ ಮುಕ್ತಾಯವಾಯಿತು. ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಂಪೂರ್ಣ ಕಾರ್ಯಕ್ರಮ ಆಯೋಜನೆ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿದ ಶ್ರೀಮತಿ ಪದ್ಮ ಅನಂತ ಭಾರದ್ವಾಜ್ ಕುಟುಂಬದವರ ಪರಿಶ್ರಮದಿಂದ ಮದುವೆ ಮನೆಗೆ ಬಂದು ಅದರ ಅತಿಥ್ಯ ಸ್ವೀಕರಿಸಿ ಹೋದಂತೆ ಎಲ್ಲ ಸದಸ್ಯರು ಸಂತಸ ಪಟ್ಟರು. ಇಂತಹ ಅನನ್ಯವಾದ ಗುಂಪು ವಿಪ್ರರ ಅಭಿವೃದ್ಧಿ ಮತ್ತು ಏಳಿಗೆಯಲ್ಲಿ ಉತ್ತಮ ಕೊಡುಗೆ ನೀಡುತ್ತಿದೆ
-ಮಾಧುರಿ ದೇಶಪಾಂಡೆ, ಬೆಂಗಳೂರು