ಬೆಂಗಳೂರು: ರಾಮ್ ಮೂರ್ತಿ ನಗರಪೊಲೀಸರು ಸೈಯದ್ ಅತೀಖ್ ಎಂಬ ಆರೋಪಿಯನ್ನು ಬಂಧಿಸಿ 6,30,000 ಬೆಲೆ ಬಾಳುವ 107 ಗ್ರಾಂ ಚಿನ್ನಾಭರಣ ಮತ್ತು ಒಂದು ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿಯು ಪ್ರಯಾಣಿಕರ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದನು.ಶುದ್ದಗುಂಟೆಪಾಳ್ಯ ಪೊಲೀಸರು ಸುಹೇಲ್ ಖಾನ್ 42, ವಜೀದ್ ಅಹಮದ್ 27, ಸೈಯದ್ಶ್ರಮಾಲುದ್ದೀನ್ 29, ಕುಮಾರಿ ರೇಖಾ 29,ಮೊಹಮ್ಮದ್ ರೆಕ್ ಇರ್ಫಾನ್ 29 ಮತ್ತು ಸಲ್ಮಾನ್ ಖಾನ್ 26 ವರ್ಷ ಆರು ಜನ ಆರೋಪಿಗಳನ್ನು ಬಂಧಿಸಿ ಇವರುಗಳು ನೀಡಿದ ಮಾಹಿತಿ ಮೇರೆಗೆ ರಾಬರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 230 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿ ಕೊಂಡಿರುತ್ತಾರೆ.
ಸುದ್ಗುಂಟೆಪಾಳ್ಯ ಪೊಲೀಸರು ಮೊಹಮ್ಮದ್ಮೆಹರಾಜ್ ಅಲಿಯಾಸ್ ಪ್ರೇಮ್ 23, ಎಂಬಆರೋಪಿಯನ್ನು ಬಂಧಿಸಿ ಎರಡು ಲಕ್ಷ ಇಪ್ಪತ್ತೈದುಸಾವಿರ ರೂ.ಬೆಲೆ ಬಾಳುವ ಹತ್ತು ಗ್ರಾಂ ತೂಕದ ಚಿನ್ನದ ಚೈನು ಹಾಗೂ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.ತಲಘಟ್ಟಪುರ ಪೊಲೀಸರು ಹಸುಗಳು ಮತ್ತು ಕುರಿಗಳು ಕಳವು ಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಫೈರೋಜ್ ಬೇಗ ಮತ್ತು ಸೈಯದ್ ರಿಜ್ವಾನ್ ಸರ್ಜಾಪುರ ರವರುಗಳನ್ನು ಬಂಧಿಸಿ 27ಕ್ಕೂ ಹೆಚ್ಚು ಜಾನುವಾರು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದು ಇವರುಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರ್ಗಳು ನಗದು ಹಣ ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳು ತಲ್ಘಟ್ಟಪುರ ಕೆಆರ್ ಪುರ ಕಗ್ಗಲಿಪುರ ವರ್ತೂರ್ ದೊಡ್ಡಬಳ್ಳಾಪುರ ಎಚ್ಎಸ್ಆರ್ ಲೇಔಟ್ ಸರ್ಜಾಪುರ ಸುಬ್ರಮಣ್ಯಪುರ ಕೆಆರ್ ಪುರಂ ಪರಪ್ಪನ ಅಗ್ರಹಾರ ಅಶೋಕನಗರ ಚಿಂತಾಮಣಿ ಕೊಳ್ಳೇಗಾಲ ಮಾಗಡಿ ರಾಮನಗರ ಕುಣಿಗಲ್ ದಿಬ್ಬೂರಹಳ್ಳಿ ಆಚಾರ್ ಹಳ್ಳಿ ಹಾಗೂ ತಮಿಳುನಾಡು ರಾಜ್ಯದ ಹೊಸೂರು ಹಸು ಮತ್ತು ಕುರಿಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.