ಬೆಂಗಳೂರು: ಸುಬ್ರಹ್ಮಣ್ಯಂಪುರ ಪೊಲೀಸ್ರು ಸಂತೋಷ್ ಮತ್ತು ಅಭಿಷೇಕ್ ಎಂಬವರನ್ನು ಬಂಧಿಸಿ ಸುಮಾರು 12 ಲಕ್ಷದ ಬೆಲೆಬಾಳುವ ಒಂದು ಕಾರ್ 11 ದಿಚಕ್ರ ವಾಹನ ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಆರೋಪಿಗಳು ತಲಘಟ್ಟಪುರ ಪೊಲೀಸ್ ಠಾಣೆಯ ಸರಹದ್ದಿನ ತುರಹಳ್ಳಿ ಸಮೀಪ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರಿಂದ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ.ಜೆಪಿ ನಗರ ಪೊಲೀಸರು ಮಹಮ್ಮದ್ ಕೌಶಿಕ್ ಮತ್ತು ಚಿನ್ನಸ್ವಾಮಿ ಎಂಬವರನ್ನು ಬಂಧಿಸಿ 15 ಲಕ್ಷ ರೂ ಬೆಲೆ ಬಾಳುವ ಎಂಟು ದ್ವಿಚಕ್ರ ವಾಹನ ವಶಪಡಿಸಿಕೊಂಡಿರುತ್ತಾರೆ.
ಕಳವು ಮಾಡಿದ್ದ ವಾಹನಗಳನ್ನು ಗೊಟ್ಟಿಗೆರೆಯಲ್ಲಿರುವ ಗುಜರಿ ವ್ಯಾಪಾರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಗುಜರಿ ವ್ಯಾಪಾರಿಯನ್ನು ಸಹ ಬಂಧಿಸಲಾಗಿರುತ್ತದೆ.ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 12 ಲಕ್ಷ ರೂ ಬೆಲೆ ಬಾಳುವ ಎಂಡಿಎಂಎ, ಕುಕಿಂಗ್ ಹಾಗೂ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಇತ್ತೀಚಿಗೆ ರಾಜನಕುಂಟೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಲು ಹೋಗಿದ್ದ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಗಾನಾ ದೇಶದ ಸಿ ಎಲ್ ಎಂಬುವವರನ್ನು ಮತ್ತು ನೈಜೀರಿಯಾ ದೇಶದ ಇ ಮಾನ್ಯುಯಲ್ ಎಂಬುವನನ್ನು ಸಹ ಬಂಧಿಸಿರುತ್ತಾರೆ .
ಕೋಣನಕುಂಟೆ ಪೊಲೀಸರು 2 ಕೆಜಿ 20 ಗ್ರಾಂ ಮಾದಕ ವಸ್ತು ಮತ್ತು 10 ಕೆಜಿ 600 ಗ್ರಾಂ ಗಾಂಜಾ ವಶಪಡಿಸಿಕೊಂಡಿರುತ್ತಾರೆ. ವಿಕಾಸ್ ಎಂಬುವನನ್ನು ಬಂಧಿಸಿ ಬಂಧಿಸಿರುತ್ತಾರೆ.
ವಿ ವಿ ಪುರಂ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬರನ್ನು ಬಂಧಿಸಿರುತ್ತಾರೆ. ಈತನಿಂದ 5 ಲಕ್ಷ ಮೌಲ್ಯದ ನಾಲ್ಕು ಕೆಜಿ ಗಾಂಜಾ ವಶಪಡಿಸಿಕೊಂಡಿರುತ್ತಾರೆ.