ಬೆಂಗಳೂರು: ಚಿಕ್ಕಜಾಲ, ಸಂಪಿಗೆಹಳ್ಳಿ ಠಾಣ ಪೊಲೀಸರು 9 ಜನ ಆರೋಪಿಗಳನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಿ 16 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ, ಮಾಂಗಲ್ಯ ಸರ ವಶಪಡಿಸಿಕೊಂಡಿರುತ್ತಾರೆ.ಬಾಲಾಜಿ(26) ಎಂಬಾತ ಸೇರಿದಂತೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ತರಬನಹಳ್ಳಿಯಲ್ಲಿ ಮನೆಯ ಕಾಂಪೌಂಡ್ ಒಳಗೆ ಹಾಕಿದ ರಾಗಿಯನ್ನು ಚೀಲದಲ್ಲಿ ತುಂಬುತ್ತಿರುವಾಗ 36 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮತ್ತೋರ್ವ ಬಂಧಿತ ಮನೆಯ ಮುಂಭಾಗದಲ್ಲಿ ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಹೋಗಿದ್ದನು.ಈ ಮೂರು ಜನ ಆರೋಪಿಗಳನ್ನು ಬಂಧಿಸಿ 9,50,000 ಬೆಲೆ ಬಾಳುವ 120 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.ಮತ್ತೊಂದುಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸರು ರೆಸಾರ್ಟ್ ಒಂದರಲ್ಲಿ ಕಳವು ಮಾಡಿದ ಓರ್ವ ವ್ಯಕ್ತಿಯನ್ನು ಬಂಧಿಸಿರುತಾರೆ.
ಸಂಪಿಗೆಹಳ್ಳಿ.ಪೊಲೀಸರು ಒಂಟಿ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ವ್ಯಕ್ತಿಯಿಂದ 53 ಗ್ರಾಂ ಚಿನ್ನಾಭರಣ, ಒಂದು ವಾಚು ವಶಪಡಿಸಿಕೊಳ್ಳಲಾಗಿರುತ್ತದೆ ಇವುಗಳ ಮೌಲ್ಯ ಮೂರು ಲಕ್ಷದ ಹತ್ತು ಸಾವಿರ ರೂ. ಆಗಿರುತ್ತದೆ.
ಸಂಪಿಗೆಹಳ್ಳಿ ಪೊಲೀಸರು ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಮೊಬೈಲ್ ಫೋನ್ ಮತ್ತು ಹಣವನ್ನು ಕಿತ್ತುಕೊಂಡು ಹೋಗಿದ್ದ ಆರಿಫ್ ಖಾನ್ (24)ಮತ್ತು ಮುಸ್ತಾಕ್ಕೀಬು ಪಾಷಾ(21) ವ್ಯಕ್ತಿಗಳನ್ನು ಬಂಧಿಸಿರುತ್ತಾರೆ.ಈ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರ್, ಚಾಕು ಮತ್ತು ನಗದು 2730 ವಶಪಡಿಸಿಕೊಂಡಿರುತ್ತಾರೆ.