ಪೀಣ್ಯ,ದಾಸರಹಳ್ಳಿ: ರಾಜಗೋಪಾಲನಗರ ವಾರ್ಡ್ ನ ಕಸ್ತೂರಿ ಬಡಾವಣೆ ಹಾಗೂ ಜಿ.ಕೆ.ಡಬ್ಲ್ಯೂ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನ ಸರಿಯಾಗಿ ಸಿಕ್ಕಿದ್ದರೆ ಕ್ಷೇತ್ರದ ರೂಪುರೇಷೆಯನ್ನೇ ಬದಲಿಸುವಂತಹ ಅಭಿವೃದ್ಧಿ ಮಾಡುತ್ತಿದ್ದೆ. ಆದರೆ ಕಾಂಗ್ರೆಸ್ ಸರ್ಕಾರವು ಅನುದಾನ ನೀಡದೇ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಮೂಲಕ ಜನರಿಗೆ ದ್ರೋಹ ಎಸಗುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ಜನರು ಸೂಕ್ತ ಸಮಯದಲ್ಲಿ ನೀಡಲಿದ್ದಾರೆ’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡ್ ಬಿಜೆಪಿ ಮುಖಂಡರಾದ ದಿನೇಶ್, ರಾಜಗೋಪಾಲನಗರ ವಾರ್ಡ್ ಮಾಜಿ ಬಿಬಿಎಂಪಿ ಅಧ್ಯಕ್ಷರಾದ ನಾಗೇಶ್, ಮಾಜಿ ಅಧ್ಯಕ್ಷ ಆರ್.ಸಿ ಹರೀಶ್, ರಂಗಣ್ಣ, ಸ್ಟುಡಿಯೋ ನಾರಾಯಣ್, ಏಳುಮಲೈ, ಹಾಲೇಶ್, ಅಂಗಡಿ ರಂಗನಾಥ್, ಮಹದೇವ್, ರೇಣುಕಮ್ಮ, ಸುರಕ್ಷಿಣಿ ಸೇರಿದಂತೆ ಎಇಇ ನರಸಿಂಹಮೂರ್ತಿ, ಎಇ ಪ್ರವೀಣ್, ಅಕ್ಷಯ್ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.