ರಾಮನಗರ: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿರುವುದು ನಮ್ಮೆಲ್ಲರ ಭಾಗ್ಯ ಎಂದು ಎಂಇಐ ಮಾಜಿ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯರಾದ ಕೆ.ಶೇಷಾದ್ರಿ (ಶಶಿ) ಸಂತಸ ವ್ಯಕ್ತಪಡಿಸಿದರು.
ನಗರದ ಕಾಮಣ್ಣನಗುಡಿ ವೃತ್ತದಲ್ಲಿ ಗುರುವಾರ ಸಂಜೆ ಕದಂಬ ಕನ್ನಡಿಗರ ಕೂಟ, ರಾಮನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಅನಿಕೇತನ ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕಳೆದ ಐವತ್ತು ವರ್ಷಗಳಿಂದ ಹಲವು ಮಹನೀಯರು ಹಲವು ಜನಪರ ಚಳುವಳಿಗಳನ್ನು ಹುಟ್ಟು ಹಾಕಿದ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಚಲನಚಿತ್ರ ನಟರಾದ ಡಾ,ರಾಜ್ಕುಮಾರ್ ಅವರು ನಾಡಿನ ಬಗ್ಗೆ ದೀಮಂತ ನಾಯಕ ರಾಗಿದ್ದರು. ಅವರ ಹಾದಿಯಲ್ಲಿ ಪುನಿತ್ರಾಜ್ಕುಮಾರ್ ಸಹ ಮಾನವತಾವಾಧಿಯಾಗಿ ನೆರವು ನೀಡುವ ಜೊತೆಗೆ ಕನ್ನಡ ನಾಡಿಗೆ ಅವರ ಕೊಡುಗೆ ಅಪಾರ. ಇತ್ತೀಚೆಗೆ ಜನರು ಮೊಬೈಲ್ ಹಾವಳಿಯಲ್ಲಿ ನಮ್ಮ ನಾಡಿನ ಸಾಂಸ್ಕøತಿಕ ಕಾರ್ಯಕ್ರಮಗಳ ಬಗ್ಗೆ ನಿರಾಶಕ್ತಿ ತೋರುತ್ತಿದ್ದಾರೆ, ಇದು ಸಲ್ಲದು ನಾವೆಲ್ಲರೂ ನಮ್ಮ ಸಂಸ್ಕøತಿ, ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರ, ರಾಜ್ಯೋತ್ಸವದಂತಹ ಸಮಾಜಕ್ಕೆಬೇಕಾದ ಮೌಲ್ಯಯುತ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ಆಶಕ್ತಿ ವಹಿಸಿದಾಗ ಮಾತ್ರ ನಮ್ಮ ಕನ್ನಡ ನಾಡು ನುಡಿಯ ಘನತೆ ಮತ್ತಷ್ಟು ಹೆಚ್ಚಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ ಸಾಹಿತ್ಯ ಮತ್ತು ಸಾಂಸ್ಕøತಿಕ ಐತಿಹ್ಯ ವಿರುವ ಕಾಮಣ್ಣನಗುಡಿ ವೃತ್ತದಲ್ಲಿ ಕನ್ನಡ ಹಬ್ಬದ ವಾತಾವರಣ ಸೃಷ್ಟಿಸಿರುವ ಶಿವರಾಜ್ ಭರಣಿ ಮತ್ತು ಸ್ನೇಹಿತರಿಗೆ ಅಭಿನಂದಿ ಸುತ್ತೆನೆ. ವೈಚಾರಿಕ ಮನೋಭಾವವಿಟ್ಟುಕೊಂಡಿರುವ ಕೆ.ಶೇಷದ್ರಿ ಅವರು ಈ ನೆಲದ ಸಾಂಸ್ಕøತಿಕ ರಾಯಬಾರಿಯಾಗಿದ್ದು ಅವರ ನೇತೃತ್ವದಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಮತ್ತು ನುಡಿನಮನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕನ್ನಡ ಭಾಷೆ ನಮ್ಮ ತಾಯಿ ಬೇರಾಗಿದೆ. ಪಂಪನ ಅಮೃತವಾಣಿಯಿಂದ ಕುವೆಂಪುವರೆಗಿನ ನಮ್ಮ ನಾಡಿನ ಕವಿಗಳು ಕನ್ನಡಿಗರ ಗುಣ ಧರ್ಮವನ್ನು ಎತ್ತಿ ಹಿಡಿದಿರುವುದು ಕಂಡು ಬರುತ್ತದೆ. ಮುಂದುವರೆದು ಕವಿಗಳು ಮತ್ತು ಸಾಹಿತಿಗಳು ಸಹ ಕನ್ನಡದ ಭಾಷೆಯ ಬಗೆಗೆ ತಾಯಿ ಭಾಷೆಯನ್ನು ವರ್ಣಿಸಿದ್ದಾರೆ ಎಂದು ಕನ್ನಡ ಭಾಷೆ ಬೆಳೆದು ಬಂದ ದಾರಿಯನ್ನು ವರ್ಣಿಸಿದರು.
ಸನ್ಮಾನಿತರ ಪರವಾಗಿ ಗಾಯಕ ರಾ.ಬಿ.ನಾಗರಾಜು ಮಾತನಾಡಿ ರಾಜ್ಯದಾಧ್ಯಂತ ನೂರಾರು ಸಂಘಟನೆಗಳು, ಸಂಸ್ಥೆಗಳು ಹುಟ್ಟಿ ಕೊಂಡಿವೆ. ಆದರೆ ವೇದಿಕೆಗಳನ್ನು ಸೃಷ್ಟಿಸಿ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ನೀಡುವಲ್ಲಿ ವಿಫಲವಾಗಿದ್ದು, ಬೆರಳೆಣಿಕೆ ಸಂಘಟನೆಗಳಷ್ಟೆ ನಾಡು, ನುಡಿಗಾಗಿ ಹೋರಾಟ ಮಾಡುತ್ತಿರುವುದು ನಮ್ಮೆಲ್ಲರ ದುರ್ದೈವ ಎಂದು ನೋವು ತೋಡಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು. ಗಣ್ಯರಾದ ಕಮಲಾ, ಶಿವಶಂಕರ್ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್, ಉಪನ್ಯಾಸಕ ಜಿ.ಶಿವಣ್ಣ, ಗಾಯಕ ರಾ.ಬಿ.ನಾಗ ರಾಜು, ಕೆ.ಸತೀಶ್, ಸುಮಾ, ಶಿವಕುಮಾರ್, ಕಮಲಾನಾಗರಾಜು. ನಾರಾಯಣ ಅವರಿಗೆ ಅನಿಕೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೌರಾಯುಕ್ತರಾದ ಮಾರಪ್ಪ, ದೇವೇಂದ್ರ, ನಾರಾಯಣ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಕಾರ್ಯಕ್ರಮದ ರುವಾರಿ ಎಸ್.ಶಿವರಾಜ್ಭರಣಿ, ಮಂಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆಶಿವಲಿಂಗಯ್ಯ, ನಾಟಕ ಅಕಾಡೆಮಿ ಸದಸ್ಯ ಬಾಬು, ಮುಖಂಡರಾದ ರಮೇಶ್ಬಾಬು, ನಾಗರಾಜು, ಆಶಾಲತಾ, ಕಮಲಾ, ಶಿವಲಿಂಗಯ್ಯ, ಮಂಜಣ್ಣ, ಸುರೇಶ್, ಪಾಪಣ್ಣ, ಉಮೇಶ್, ಯಶ್ವಂತ್, ಅಶೋಕ್, ಶ್ರೀನಿವಾಸ್, ಹರೀಶ್, ವಿಜಿ ಸೇರಿದಂತೆ ಕದಂಬ ಕನ್ನಡಿಗರ ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.