ಬೆಂಗಳೂರು: ಕನ್ನಡ ಜಾನಪದ ಪರಿಷತ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಗೋವಿಂದರಾಜನಗರದ ಮೂಡಲಪಾಳ್ಯ ಕಲ್ಯಾಣ ನಗರದ ಜ್ಞಾನಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಮತ್ತು ಕನ್ನಡ ಜಾನಪದ ಸುಗ್ಗಿಸಂಭ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಮಧುರಚೆನ್ನ ಪ್ರಶಸ್ತಿ ಪ್ರದಾನ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಪ್ರಿಯಕಷ್ಣರವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರವರು ನೆರವೇರಿಸಿದರು. ಸಮಾರೋಪದ ಅಧ್ಯಕ್ಷತೆಯನ್ನು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಸಿದ್ದರಾಜು ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ವಹಿಸಿದ್ದರು. ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ, ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಡಾ. ಕೆ.ಎಸ್. ಕೌಜಲಗಿ, ಕಜಾಪ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾ ರಿಯಾಜ್ ಪಾಷ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ದಿವ್ಯ ಸಾನಿಧ್ಯ ವಹಿಸಿದ್ದ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ ಸಿದ್ದರಾಜು ಸ್ವಾಮಿಗಳು ಮಾತನಾಡಿ ಪ್ರಕೃತಿಯ ನಾಡಿ ಮಿಡಿತವನ್ನು ಬಲ್ಲವರು ಬುಡಕಟ್ಟು ಜನಾಂಗದವರು ಮಾತ್ರ. ಅವರಿಂದ ಪ್ರಾರಂಭವಾದ ಜಾನಪದ ವಿಶ್ವದಲ್ಲಿ ತನ್ನ ಮಹತ್ವವನ್ನು ಕಂಡುಕೊಂಡಿದೆ. ಓದು-ಬರಹ ಬಾರದ ನಮ್ಮ ಹಿರಿಯರು ಕಟ್ಟಿಕೊಟ್ಟಿರುವಂತಹ ಮೂಲ ಜನಪದ ಸಾಹಿತ್ಯ, ಜನಪದರು ಕಟ್ಟಿ ಬೆಳೆಸಿದ ಜನಪದ ಕಲೆ ಮತ್ತು ಸಾಹಿತ್ಯ ಇತ್ತೀಚಿನ ಕಾಲಘಟ್ಟದಲ್ಲಿ ನಶಿಸುವ ಹಂತಕ್ಕೆ ಬಂದು ನಿಂತಿದೆ.
ಪಾಶ್ಚಿಮಾತ್ಯ ಸಾಹಿತ್ಯದ ಹೊಡೆತಕ್ಕೆ ಸಿಲುಕಿ ಜನಪದ ನಲುಗಿ ಹೋಗುತ್ತಿದೆ. ಜನಪದ ಸಾಹಿತ್ಯವನ್ನು ಅರಿತು,ಜನಪದ ಕಲೆಯನ್ನು ಯುವಜನರು ಕಲಿತು ಪ್ರದರ್ಶಿಸುವಂತಹ ಎದೆಗಾರಿಕೆಯನ್ನು ಮೈಗೂಡಿಸಿಕೊಂಡು ಸಾಗಬೇಕಿದೆ. ಈ ದಿನಗಳಲ್ಲಿ ಕನ್ನಡ ಜಾನಪದ ಪರಿಷತ್ ಜಾನಪದ ಕಲೆಗಳನ್ನು, ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ, ವಿಶ್ವ ಬುಡಕಟ್ಟು ದಿನಾಚರಣೆ ಮತ್ತು ಕನ್ನಡ ಜಾನಪದ ಸುಗ್ಗಿ ಸಂಭ್ರಮ ಮತ್ತು ದಶಮಾನೋತ್ಸವ ಹೊಸ್ತಿಲಲ್ಲಿ ಬಂದು ನಿಂತಿರುವ ಕನ್ನಡ ಜಾನಪದ ಪರಿಷತ್ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸೇವೆ ಮಾಡುತ್ತಿರುವ ಸಾಧಕರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಮಧುರಚೆನ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವ ಕನ್ನಡ ಜಾನಪದ ಪರಿಷತ್ ಈಗಿನ ಪೀಳಿಗೆಗೆ ಬುಡಕಟ್ಟು ಜನರ ಮತ್ತು ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ಮತ್ತು ಗೋವಿಂದರಾಜನಗರ ಕ್ಷೇತ್ರದ ಅಧ್ಯಕ್ಷ ರ. ನರಸಿಂಹಮೂರ್ತಿ ಅವರ ಶ್ರಮ ಶ್ಲಾಘನೀಯ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿರುವ ವಿಶೇಷ ಸಾಧಕರಾದ ಕ್ರೀಡಾ ಕ್ಷೇತ್ರದ ಖ್ಯಾತ ಅಂತರರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ, ಫಿಟ್ನೆಸ್ ಗುರು, ವಿಜಯ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್,ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಎಂ. ನಂಜಪ್ಪ, ಸಂಗೀತ ಕ್ಷೇತ್ರದಿಂದ ಹೆಸರಾಂತ ಸಂಗೀತ ನಿರ್ದೇಶಕ ಪುಣ್ಯೇಶ್ ಕುಮಾರ್, ಅಂತಾರಾಷ್ಟ್ರೀಯ ಜಾನಪದ ಗಾಯಕ ಅರುಣ್ ವೆ. ಚಿ, ಅಂತಾರಾಷ್ಟ್ರೀಯ ಜಂಬೆ ವಾದಕ ಜಂಬೆ ಬಾಲು, ಖ್ಯಾತ ಉದಯೋನ್ಮುಖ ಗಾಯಕಿ ಕು|| ದತ್ತಶ್ರೀ, ಹಿರಿಯ ಜಾನಪದ ಗಾಯಕ ಹೆಚ್.ಎಸ್. ಜಯರಾಮ್, ಪರಿಸರ ಕ್ಷೇತ್ರದ ಹಸಿರು ಸೇನಾ ಪಡೆಸಂಸ್ಥಾಪಕ ಅಧ್ಯಕ್ಷ ಡಿ.ಎಸ್. ಕಿರಣ್ ಕುಮಾರ್, ಸೇವಾ ಕ್ಷೇತ್ರದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ನಾ. ಶ್ರೀಧರ್, ಚೀಫ್ ಟ್ರಾಫಿಕ್ ವಾರ್ಡನ್ ಸಿ.ವಿ. ಮುರಳೀಧರ, ಸಮಾಜ ಸೇವಾ ಕ್ಷೇತ್ರದಿಂದ ಸಮಾಜ ಸೇವಕ ಕೆ. ಕಣ್ಣಯ್ಯ, ಚಳುವಳಿ ಕ್ಷೇತ್ರದಿಂದ ಜಯ ಕರ್ನಾಟಕದ ಗೋವಿಂದರಾಜನಗರ ವಿ.ಸಭಾ ಕ್ಷೇತ್ರದ ಅಧ್ಯಕ್ಷ ಪುರುಷೋತ್ತಮ್, ದಲಿತ ಚಳುವಳಿಯ, ದಲಿತ ಸಂಘರ್ಷ ಸೇನೆಯ ರಾಜ್ಯಾಧ್ಯಕ್ಷ ಎಂ. ಲಿಂಗರಾಜು ಮತ್ತು ಸೇವಾ ಕ್ಷೇತ್ರದಿಂದ ಜೀತ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಗುರುತಿಸಿ ಸೌಹಾರ್ದ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಎನ್ ರವರಿಗೆ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಮಟ್ಟದ ಪ್ರತಿಷ್ಠಿತ ‘ಮಧುರಚೆನ್ನ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ಶಾಂತಕುಮಾರಿ, ಭಾರತೀಯ ಸೇನೆ ಟೆರಿಟೋರಿ ಯಲ್ ಆರ್ಮಿ ಕಮಿಷನ್ಡ್ ಆಫೀಸರ್ ಭವ್ಯ ನರಸಿಂಹಮೂರ್ತಿ, ಇಂದು ಸಂಜೆ ಪತ್ರಿಕೆಯ ಮುಖ್ಯಸ್ಥರಾದ ಡಾ. ಜಿ. ವೈ ಪದ್ಮನಾಗರಾಜು, ಕಸಾಪ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಈ ಸಂಜೆ ಪತ್ರಿಕೆಯ ಮುಖ್ಯ ವರದಿಗಾರರಾದ ರಾಮಚಂದ್ರ, ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಸಾಂಸ್ಕೃತಿಕ ಚಿಂತಕರಾದ ಸಂಗನ ಬಸಪ್ಪ ಬಿರಾದಾರ, ಕಜಾಪ ಬ್ಯಾಟರಾಯನಪುರದ ಅಧ್ಯಕ್ಷ ಮಹೇಂದ್ರ ಮತ್ತಿತರ ಗಣ್ಯರು, ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.