ಮುಳಬಾಗಿಲು: ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಉಚ್ಚನ್ಯಾಯಾಲಯ ನಿರ್ದೇಶನ ನೀಡಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ದಸಂಸ ಒಕ್ಕೂಟದ ಜಿಲ್ಲಾ ಸಂಘಟನಾ ಸಂಯೋಜಕ ಮೆಕ್ಯಾನಿಕ್ ಶ್ರೀನಿವಾಸ್ ಆರೋಪಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕೋಮುವಾದವನ್ನು ಗಟ್ಟಿಗೊಳಿಸಲು ಇಡೀ ಭಾರತೀಯರ ಮನಸುಗಳನ್ನು ಛಿದ್ರಗೊಳಿಸುತ್ತಿದೆ ಎಂದರು.ಎಸ್ಪಿ ಮತ್ತು ಟಿಎಸ್ ಪಿ ಮೀಸಲು ಹಣ 25 ಸಾವಿರ ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ 5 ಗ್ಯಾರಂಟಿಗಳಿಗೆ ಬಳಿಸಿಕೊಂಡಿದ್ದು ಇದರಿಂದ ಸಮುದಾಯಗಳ ಅಭಿವೃದ್ದಿ ಕುಂಠಿತಗೂಂಡಿದ್ದು ಕೂಡಲೇ ಈ ಹಣವನ್ನು ಹಿಂದುರಿಗಿಸಬೇಕೆಂದು ಒತ್ತಾಯಿಸಿದರು.
ಎಸ್ಸಿಎಸ್ ಪಿ ಮತ್ತು ಟಿಎಸ್ ಪಿ ಕಾಯ್ದೆಯ ಯೋಜನೆಗಳ ಜಾರಿಗೆ ಕೂಡಲೇ ಏಕ ಗವಾಕ್ಷಿ ಪದ್ದತಿಯನ್ನೂ ಜಾರಿಗೊಳಿಸಬೇಕು.ಹೊರ ಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ದತಿಗೆ ಅನುಗುಣವಾಗಿ ಮೀಸಲಾತಿ ನುಡಬೇಕು.ಎಸ್ಸಿ ಎಸ್ಟಿ ಮೆರೀಟ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನಕ್ಕೆ ವಿಧಿಸಿರುವ ಅದಾಯ ಹಾಗೂ ಅಂಕಗಳ ಮಿತೀಯನ್ನೂ ರದ್ದುಗೊಳಿಸಿ ಈ ಹಿಂದೆ ನಿಗದಿ ಪಡಿಸಿದಂರೂ ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.ರಾಮಚಂದ್ರಪ, ಗಣೇಶ್ ಪಾಳ್ಯ ಕಿಟ್ಟಿ, ಗುಜ್ಜಮಾರಡಹಳ್ಳಿ ಜಗದೀಶ್, ಕಪ್ಪಲಮಡಗು ಅಶೋಕ್, ರೆಡ್ಡಿಹಳ್ಳಿ ಅಭಿ, ಬಂಡಹಳ್ಳಿ ಶ್ರೀರಾಮ್, ವಾನಿಗಾನಹಳ್ಳಿ ವೆಂಕಟೇಶಪ್ಪ, ಶಿವಕೇಶವನಗರ ನಾಗರಾಜ್ ಇದ್ದರು.