ಬೆಂಗಳೂರು; ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನ ನವ ವಿದ್ಯಾರ್ಥಿಗಳ ದಿನ ಹಾಗೂ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೋ. ಡಾ.ಎಸ್.ವಿ.
ಸುರೇಶ್, ಕಾನೂನು ವಿದ್ಯಾರ್ಥಿಗಳು ನಿಜವಾದ ಗುರಿಯನ್ನು ಇಟ್ಟುಕೊಂಡು ಯಶಸ್ವಿಯತ್ತ ಸಾಗಬಹುದು,ಕಾನೂನು ವಿಭಾಗದ ಅಧ್ಯಯನದಲ್ಲಿ ವಿಪುಲ ಅವಕಾಶಗಳಿದ್ದು ಶ್ರದ್ಧೆಯ ಅಭ್ಯಾಸದಿಂದ ನ್ಯಾಯಾಂಗದಲ್ಲಿ ಉತ್ತಮ ಸ್ಥಾನ ಹೊಂದಿ ಎಂದು ಹೇಳಿದರು.
ಜನತಾ ಏಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಹೆಚ್.ಜಿ.ಬಾಲಗೋಪಾಲ, ಸೊಸೈಟಿಯ ಉಪಾಧ್ಯಕ್ಷ ಎಸ್.ಟಿ.ನಾರಾಯಣ ಗೌಡ, ಗವರ್ನಿಗ್ ಮಂಡಳಿಯ
ಅಧ್ಯಕ್ಷ ಎಂ.ಆರ್.ಲಕ್ಷಿ ಮನೋಹರ್, ಪ್ರಾಂಶುಪಾಲರಾದ ಡಾ.ಕೆ.ಬಿ.ಕೆಂಪೇಗೌಡ ಭಾಗವಹಿಸಿದ್ದರು.