ಶ್ರೀವ್ಯಾಸರಾಜರಿಂದ ಪ್ರತಿಷ್ಠಿತ ಶ್ರೀಏಳುಹೆಡೆ ನಾಗಪ್ಪ ದೇವರು. ಶ್ರೀಸಪ್ತ್ತಫಣೀಶ್ವರ ಸ್ವಾಮಿ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಇದೆ. ಶ್ರೀ ಏಳುಹೆಡೆ ನಾಗಪ್ಪ ದೇವರಿಗೆ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನೆಡೆಯುತ್ತವೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹಾಗೂ ಮನೆ ದೇವರು ಎಂದು ಪೂಜಿಸುವವರು ಶ್ರಾವಣ ಮಾಸದಲ್ಲಿ ಬಂದು ದರ್ಶನ ಪಡೆದು ಹಾಲಿನ ಅಭಿಷೇಕ ಮಾಡಿಸುವ ಪದ್ಧತಿ ಪ್ರಾರಂಭದಿಂದಲೂ ಬಂದಿದೆ. ಶ್ರವಣ ದೋಷ, ದೃಷ್ಟಿ ದೋಷ,ಲಗ್ನ ವಿಳಂಬ, ಚರ್ಮ ರೋಗ, ಮಕ್ಕಳಾಗದಿದ್ದವರು, ಇಲ್ಲಿ ಸೇವೆ ಸಲ್ಲಿಸಿ ದೋಷ ನಿವಾರಣೆಗೆ ಸ್ವಾಮಿಗೆ ಹರಕೆ ಹೊತ್ತು ತೀರಿಸುತ್ಥಾರೆ.
ನಾಗ ಪ್ರತಿಷ್ಠೆ ಕೂಡಾ ಇಲ್ಲಿ ಮಾಡಿಸುತ್ತಾರೆ. ದೇವಳದ ಪ್ರತಿಷ್ಠಾನ ಸಮಯದಿಂದಲೂ ಶ್ರೀ ಹೊಳಗುಂದಿ ಮನೆತನದ ಅರ್ಚಕರು,ವಂಶಪಾರಂಪರ್ಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ,ಪ್ರಸ್ತುತ ಶ್ರೀ ಹೊಳಗುಂದಿ ನರಸಿಂಹಾಚಾರ್ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಭಕ್ತರು ಶ್ರಾವಣ ಮಾಸದಲ್ಲಿ ಶ್ರೀ ಏಳುಹೆಡೆ ನಾಗಪ್ಪ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಲು ವಿನಂತಿಸುತ್ತೇವೆ.