ತಿ.ನರಸೀಪುರ: ಪೋಷಕರು ತಮ್ಮ ಮಕ್ಕಳು ವಿದ್ಯಾವಂತರಾಗಿ ತಮ್ಮ ಮಕ್ಕಳ ಬದುಕು ಸುಂದರವಾಗಿರಲೆಂದು ತಾವು ಎಷ್ಟೇ ಕಷ್ಟದಲ್ಲಿದ್ದರೂ ಉತ್ತಮವಾದ ಉಡುಪು ಕೊಡಿಸುತ್ತಾರೆ ಮತ್ತು ವಿದ್ಯಾಭ್ಯಾಸದ ಶುಲ್ಕ ಕಟ್ಟುತ್ತಾರೆ ಅದಕ್ಕೆ ಪೂರಕವಾಗಿ ವಿದ್ಯಾರ್ಥಿ ಗಳು ಓದಬೇಕು ಅವರಿಗೆ ಗೌರವ ತರುವಂತ ಕೆಲಸ ಮಾಡಬೇಕು ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವುದಕ್ಕೆ ಓದುವುದು ಮುಖ್ಯವಲ್ಲ ಜ್ಞಾನಾರ್ಜನೆಗಾಗಿ ಓದಬೇಕು ಎಂದು ನ್ಯಾಯಾಧೀಶರಾದ ಹನುಮಂತ ಜಿ.ಹೆಚ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪಟ್ಟಣದ ಹಳೆ ಸಂತೆಮಾಳೆ ಸಮೀಪದ ಪಿಯು ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ರವರ ಸಹಭಾಗಿತ್ವದಲ್ಲಿ ಆಯೋಜನೆ ಮಾಡಿದ್ದ ವಿಶ್ವಮಾನವ ಹಕ್ಕುಗಳ ದಿನ ಮತ್ತು ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು
ವಿದ್ಯಾಭ್ಯಾಸದ ಸಮಯದಲ್ಲಿ ಅಂಕ ಹೆಚ್ಚು ಗಳಿಸಲು ವಿದ್ಯಾರ್ಥಿಗಳು ಓದುತ್ತಾರೆ ಅದು ಸದಾಕಾಲ ನಮ್ಮ ನೆನಪಿನಲ್ಲಿ ಇರುವುದಿಲ್ಲ ಅದೇ ಓದನ್ನು ಜ್ಞಾನಾರ್ಜನೆಯಾಗಿ ಓದಿದರೆ ಸದಾ ಕಾಲ ನಮ್ಮಲ್ಲಿ ನೆನಪಲ್ಲಿ ಇರುತ್ತದೆ.
ಹಾಗೆಯೇ ಕಾನೂನಿನ ಅಡಿಯಲ್ಲಿ ಮಾನವ ಹಕ್ಕುಗಳ ಬಗ್ಗೆ ನಾವು ಅರಿತುಕೊಳ್ಳಬೇಕು. ನಮಗೆ ಸಿಗುವಂತಹ ಹಕ್ಕುಗಳನ್ನು ನಾವು ಪಡೆಯಬೇಕು,ಇದು ಶಿಕ್ಷಣದಿಂದ ಸಾಧ್ಯ ಎಲ್ಲರೂ ವಿದ್ಯಾವಂತರಾಗಬೇಕು ಮಾನವ ಹಕ್ಕುಗಳ ಬಗ್ಗೆ ಸಂಕ್ಷಿಪ್ತವಾಗಿ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಡಾ.ಮಧುಸೂದನ್ ಏಡ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಲಿಂಗರಾಜು, ಮುಖ್ಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಅಭಿಲಾಷ್ , ವಕೀಲರ ಸಂಘದ ಅಧ್ಯಕ್ಷರಾದ ಮಹಾದೇವಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.