ಕನಕಪುರ: ನಗರದ ಸರ್ ಎಂ. ವಿಶ್ವೇಶ್ವರಾಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25 ನೇ ವರ್ಷದ ವಾರ್ಷಿಕ ಮಹಾಸಭೆಯು ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು.ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೆಂಕಟರಮಣಸ್ವಾಮಿ ನಗರದ ಬೂದಿಕೆರೆಯಲ್ಲಿರುವ ನಿವೇಶನದಲ್ಲಿ ಇಂದು ಕಟ್ಟಡಕ್ಕಾಗಿ ನೂತನ ಶಿಲಾನ್ಯಾಸವನ್ನು ನೆರವೇರಿಸಲಾಗಿದ್ದು ಸಂಸ್ಥೆ ಯು ನಡೆದು ಬಂದ ಹಾದಿ ಹಾಗೂ ಮುಂದೆ ಸಂಸ್ಥೆಯ ಗುರಿ ತಲುಪಲು ಎಲ್ಲರೂ ಇನ್ನೂ ಹೆಚ್ಚಿನ ಶ್ರಮದೊಂದಿಗೆ ಕರ್ತವ್ಯ ನಿರ್ವಹಿಸಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವಂತೆ ಸಲಹೆ ನೀಡಿದರು.
ಸೊಸೈಟಿ ಅಧ್ಯಕ್ಷ ಟಿ.ಜಯರಾಮು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಸಹಕಾರ ತತ್ವದಂತೆ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಪ್ರತಿಭಾ ಪುರಸ್ಕಾರ ಸೇರಿದಂತೆಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ, ಸಂಘದ ಸದಸ್ಯರು ತಮ್ಮ ಹಾಗೂ ಕುಟುಂಬದ ಆರೋಗ್ಯದ ಖರ್ಚು ವೆಚ್ಚಕ್ಕಾಗಿ ಯಶಸ್ವಿನಿ ಯೋಜನೆ ನೊಂದಾಯಿಸಿ ಕೊಂಡು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು,ಸೊಸೈಟಿಯಲ್ಲಿ ಸಾಲ ತೆಗೆದುಕೊಂಡು ಮರ ಪಾವತಿ ಮಾಡದೇ ಇರುವ ಸುಸ್ತಿ ದಾರರಿಗೆ ಈಗಾಗಲೇ ನೋಟಿಸ್ ಜಾರಿಮಾಡಲಾಗಿದ್ದು ಅವರೆಲ್ಲರೂ ಸಾಲ ಮರುಪಾವತಿ ಮಾಡುವಂತೆ ಮನವಿಯನ್ನು ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ಪದ್ಮಶ್ರೀ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ಸೂಚನಾ ನಡವಳಿ ಪತ್ರವನ್ನು ಮಂಡಿಸಿ ಜಮಾ-ಖರ್ಚು ವೆಚ್ಚ ಹಾಗೂ ಬಜೆಟ್ ಅಂದಾಜು ಆಯವ್ಯಯ ಮಂಜೂರಾತಿ ಪಡೆದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ರಜತ ಮಹೋತ್ಸವಕ್ಕೆ ಶುಭ ಹಾರೈಸಿದರು,ಸೊಸೈಟಿ ಉಪಾಧ್ಯಕ್ಷ ರವಿಪಾಲ್, ನಿಕಟಪೂರ್ವ ಅಧ್ಯಕ್ಷ ಕೆ.ಚಂದ್ರು, ಸಂಸ್ಥಾಪಕ ನಿರ್ದೇಶಕ ಬಿಳಿಗಿರಿ ರಂಗಸ್ವಾಮಿ, ನಿರ್ದೇಶಕ ಕಾಮೇಶ್, ಪೆರುಮಾಳಯ್ಯ,ನಂಜುಂಡಪ್ಪ,ದೇವರಾಜು,ಟಿ.ಆರ್.ಕಾವ್ಯ,ಕೆ.ಎಸ್.ಉಮೇಶ್ಕುಮಾರ್ ಸೇರಿದಂತೆ ಸೊಸೈಟಿ ಸದಸ್ಯರು ಹಾಗೂ ಸಿಬ್ಬಂಧಿಗಳು ಮಹಾಸಭೆಯಲ್ಲಿ ಭಾಗವಹಿಸಿದ್ದರು.