ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರವರು ಕನ್ನಡ ಸಂಘ ಸಿಂಗಪುರ ರವರ ಸಹಯೋಗದೊಂದಿಗೆ ಸಿಂಗಪುರದಲ್ಲಿ ಆಯೋಜಿಸಿದ್ದ ಎರಡನೇ ವಿಶ್ವಕನ್ನಡ ಹಬ್ಬವು ಅದ್ದೂರಿಯಾಗಿ ನೆರವೇರಿತು. ಸಿದ್ದಿ ಜನಾಂಗದ ಬುಡಕಟ್ಟು ಕಲಾವಿದರನ್ನು ಗುರುತಿಸಿ ವಿದೇಶದಲ್ಲಿ ನಡೆದ ವಿಶ್ವ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅವರಿಗೆ ಅವಕಾಶ ಕಲ್ಪಿಸಿಕೊಟ್ಟದ್ದು ವಿಶೇಷವಾಗಿತ್ತು.
ಸಿಂಗಪುರದ ಪೊಂಗಲ್ ನಗರದಲ್ಲಿರುವ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂತು. ಸಿಂಗಪುರದ ಸಂಸದರಾದವಿಕ್ರಮ್ ನಾಯರ್, ಮಹರ್ಷಿ ಆನಂದ್ ಗುರೂಜಿ, ಇಸ್ರೋ ವಿಜ್ಞಾನಿಗಳಾದಕಿರಣ್ ಕುಮಾರ್ಕಾ, ರ್ಯಕ್ರಮದ ಸರ್ವಾಧ್ಯಕ್ಷರಾದ ಸಿ ಸೋಮಶೇಖರ್, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಟಿ ಶಿವಕುಮಾರ್ ನಾಗರ ನವಿಲೆ, ಸಿಂಗಪುರದ ಕನ್ನಡ ಸಂಘದ ಅಧ್ಯಕ್ಷರಾದ ವೆಂಕಟ ರತ್ನಯ್ಯ, ಶ್ರೀ ಪ್ರಸಾದ್ ಗುರೂಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ, ದಿನೇಶ್ ಜೋಶಿ, ಚಲನಚಿತ್ರ ನಟರಾದ ವಸಿಷ್ಟ ಸಿಂಹ ಹರಿಪ್ರಿಯ ಈ ಗಣ್ಯರನ್ನು ಹುಲಿ ವೇಷದಾರಿಗಳು, ಭರತನಾಟ್ಯ ಕಲಾವಿದರು, ಯಕ್ಷಗಾನ ಕಲಾವಿದರು, ಸಿದ್ದಿ ಕಲಾವಿದರು, ಸಿಂಗಾಪುರದ ಸಾಂಸ್ಕೃತಿಕ ಕಲಾವಿದರು ಮತ್ತು ಮಹಿಳೆಯರು ಕುಂಭಮೇಳದೊಂದಿಗೆ ಹಾಗೂ ಸಕಲ ಗೌರವಗಳೊಂದಿಗೆ ವೇದಿಕೆಯ ಬಳಿ ಕರೆತಂದರು. ಕಾವ್ಯ ರವರು ರಾಷ್ಟ್ರಧ್ವಜವನ್ನು ವೇದಿಕೆಗೆ ತಂದರು.
ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರು ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿಗಳಾದ ಕಿರಣ್ ಕುಮಾರ್ ರವರಿಗೆ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಾಧಕರಿಗೆ ವಿಶ್ವಚೇತನ ಮತ್ತು ವಿಶ್ವಮಾನ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವಾಧ್ಯಕ್ಷರಾದ ಸಿ ಸೋಮಶೇಖರ್ ರವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಗಾಯನ, ನಾಟಕ, ವಿಶ್ವ ಕನ್ನಡ ಹಬ್ಬಕ್ಕೆ ದುಡಿದ ರೂವಾರಿಗಳಿಗೆ ಗೌರವ ಸನ್ಮಾನ ನೆರವೇರಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಮಾರು 150 ಜನ ಕಲಾವಿದರು ಭಾಗವಹಿಸಿದ್ದರು. ಮೂಲ ಕನ್ನಡಿಗರು ಮತ್ತು ಅನಿವಾಸಿ ಕನ್ನಡಿಗರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಭಾಂಗಣ ತುಂಬಿದ ಕಾರ್ಯಕ್ರಮವನ್ನು ಎಲ್ಲರೂ ಕಣ್ತುಂಬಿಸಿಕೊಂಡರು.