ದೊಡ್ಡಬಳ್ಳಾಪುರ: ಶ್ರೀ ರಾಮ ನರ್ಸಿಂಗ್ ಕಾಲೇಜ್ ನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಸೂರ್ಯ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕರಾದ ಡಾ ಹೆಚ್ ಜಿ ವಿಜಯಕುಮಾರ್ ಕ್ಯಾನ್ಸರ್ ಒಂದು ಬಯಾನಕ ಕಾಯಿಲೆ ಇದು ಬರದಂತೆ ತಡೆಯಲು ಸಾಧ್ಯವಿಲ್ಲ ಆದರೆ ಮೊದಲೇ ಕಂಡುಕೊಂಡರೆ ನಿಯಂತ್ರಣ ಮಾಡಬಹುದು ಕ್ಯಾನ್ಸರ್ ಪ್ರಮುಖವಾಗಿ ದೂಮಪಾನ ಮದ್ಯಪಾನ ತಂಬಾಕು ಉತ್ಪನ್ನಗಳ ಬಳಕೆಯಿಂದ ಬರುತ್ತದೆ ಎಂದು ಹೇಳಿದರು.
ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಕ್ಯಾನ್ಸರ್ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರಿಗೂ ಕ್ಯಾನ್ಸರ್ ಬರುತ್ತದೆ ಇದಕ್ಕೆ ವಯಸ್ಸಿನ ಅಂತರ ಇರುವುದಿಲ್ಲ ಮಹಿಳೆಯರಿಗೆ ಸ್ಥನ ಕ್ಯಾನ್ಸರ್ ಪುರುಷರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಅದುದರಿಂದ ಅದಷ್ಟು ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳನ್ನು ಬಳಸಬಾರದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಾಶೆಟ್ಟಿಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ನಾರಾಯಣ ಸ್ವಾಮಿ ಶ್ರೀ ರಾಮ ನರ್ಸಿಂಗ್ ಕಾಲೇಜ್ ನ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.