ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಉದ್ದೇಬೋರನಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ದಿವ್ಯ ಮತ್ತು ಲೋಹಿತ್ ಅವರ 1 ವರ್ಷ 9ತಿಂಗಳ ಮಗು ಜನ್ವಿತಾಳನ್ನು ಅಂತಾ ರಾಷ್ಟ್ರೀಯ ವರ್ಲ್ಡ್ ಆಫ್ ರೆಕಾರ್ಡ್ಸ್ ಸೂಸ್ಥೆ ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಕಳೆದ ನವೆಂಬರ್ 23ರಂದು ರಂದು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯವರು ವಿಶ್ವ ದಾಖಲೆ ಗೌರವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಗುವಿನ ತಾಯಿ ಗೃಹಿಣಿಯಾಗಿದ್ದು, ತಂದೆ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜನ್ವಿತಾ 50ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸಿದ್ದು ,ಗ್ರಹ ಗಳು,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳು, ಕೇಂದ್ರಾಡಳಿತ ಪ್ರದೇಶಗಳು, ಕರ್ನಾಟಕ ಐತಿಹಾಸಿಕ ಸ್ಥಳಗಳು,ಹಿಂದೂ ಪಂಚಾಗದ ಮಾಸಗಳು,ಆಕಾರ ಗಳು, ಋತುಗಳು, ತಿಂಗಳು, ವಾರ ಹಾಗೂ ಕನ್ನಡ , ಇಂಗ್ಲೀಷನಲ್ಲಿ ರೈಮ್ಸ್ ಗಳನ್ನು ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ 50 ಮೀಟರ್ ಅಂತರವನ್ನು 40. ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು “ಸೂಪರ್ ಟ್ಯಾಲೆಂಟೆಡ್ ಕಿಡ್” ಎಂಬ ಪ್ರಶಸ್ತಿಯನ್ನೂ ನೀಡಿ “ಒನ್ ಇನ್ ಎ ಮಿಲಿಯನ್” ಎಂದು ಪರಿಗಣಿಸಿದೆ.