ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆಯು ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ದಿನಾಂಕ 29.12.2024ರಂದು ಭಾನುವಾರ ಬೆಳಿಗ್ಗೆ 9.00 ಗಂಟೆಗೆ ನಗರದ ನಾಡಪ್ರಭು ಕೆಂಪೇಗೌಡ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಸುಭಾಷ ಚಂದ್ರ ಬೋಸ್, ಭಗತ್ ಸಿಂಗ್, ರಾಣಿ ವಿವಿಧ ಸ್ಥಳಗಳಲ್ಲಿರುವ 15 ವಿಶ್ವ ಮಾನ್ಯರ ಪ್ರತಿಮೆಗಳಾದ ಜಗಜ್ಯೋತಿ ಬಸವೇಶ್ವರ, ಕನಕದಾಸ,
ಡಾ| ಬಿ. ಆರ್. ಅಬ್ಬಕ್ಕ, ಡಾ|| ಎಚ್ ನರಸಿಂಹಯ್ಯ, ಸರ್ ಎಂ ವಿಶ್ವೇಶ್ವರಯ್ಯ, ಡಿ ವಿ ಗುಂಡಪ್ಪ, ಮುಂತಾದವರ ಪ್ರತಿಮೆ / ಪುತ್ಥಳಿಗಳಿಗೆ ಏಕ ಕಾಲದಲ್ಲಿ ಪುಷ್ಪನಮನ ಸಲ್ಲಿಸುವುದರ ಮೂಲಕ ಕುವೆಂಪು ಅವರು ವಿಶ್ವಕ್ಕೆ ನೀಡಿದ ವಿಶ್ವ ಮಾನವ ಸಂದೇಶ ಹಾಗೂ ಅವರ ಸಪ್ತ ಸೂತ್ರಗಳನ್ನು ಒಳಗೊಂಡ ವಿಶ್ವ ಮಾನವ ಸಂದೇಶದ ಸಾವಿರಾರು ಕಿರುಹೊತ್ತಿಗೆಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಸಮಿತಿಯ ಜನ ವಿಜ್ಞಾನ ಚಳವಳಿ ಕಟ್ಟುವ ಮೂಲಕ ಬೆಂಗಳೂರಿನಲ್ಲಿ ಒಂದು ಹೊಸ ಜನಾಂದೋಳವನ್ನು ಯಶಸ್ವಿಯಾಗಿ ಆರಂಭಿಸಿದೆ ಎಂದು ರಾಜ್ಯ ಸಭಾ ಮಾಜಿ ಸದಸ್ಯರೂ, ಚಿಂತಕರಾದ ಡಾ| ಎಲ್ ಹನುಮಂತಯ್ಯ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಇದು ಸಮಿತಿಯು ಮಾಡುತ್ತಿರುವ ಸ್ತುತ್ಯಾರ್ಹ ಕಾರ್ಯವಾಗಿದೆ ಎಂದರು. ಕುವೆಂಪು ಅವರು ಮತಗಳಲ್ಲಿನ ಸಂಕುಚಿತ ಸಂಕೀರ್ಣತೆಯ ವಿಷಯವನ್ನು ಹಾಗೂ ಸಮಾಜದಲ್ಲಿನ ಮೇಲು-ಕೀಳು ಎಂಬ ತಾರತಮ್ಯದ ವಿರುದ್ಧ ತಮ್ಮ ಹರಿತವಾದ ಲೇಖನಗಳ ಮೂಲಕ ಜನತೆಯನ್ನು ಎಚ್ಚರಿಸಿದವರು. ತಮ್ಮ ಜೀವಿತದ ಪೂರ್ಣ ಸಮಯವನ್ನು ಸಮ ಸಮಾಜದ ನಿರ್ಮಾಣಕ್ಕಾಗಿ ಮುಡುಪಾಗಿಟ್ಟವರು ಎಂದರು.
ಇದೇ ಸಂದರ್ಭದಲ್ಲಿ ಪ್ರೊ || ತಾ ನಂ ಜ್ಞಾನೇಶ್ವವರ ಅವರು ರಚಿಸಿದ ಕುವೆಂಪು ಸಂದೇಶ ಎಂಬ ಕಿರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ನಾ ಶ್ರೀಧರ ಅವರು ವಹಿಸಿದ್ದರು. ಕನ್ನಡ ಪರ ಹೋರಾಟಗಾರ ಶ್ರೀ ಪಾಲನೇತ್ರ, ಕಾರ್ಯದರ್ಶಿ ಶ್ರೀ ಎಂ ಲಕ್ಷ್ಮೀನರಸಿಂಹ, ಪತ್ರಕರ್ತ ಕ್ರಾಂತಿರಾಜು, ಹಾಗೂ ಅನೇಕ ಕಾರ್ಯಕರ್ತರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕುವೆಂಪು ರಚಿಸಿದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.