ಶಿವಮೊಗ್ಗ: ಮಾಜಿ ನಗರಸಭಾ ಸದಸ್ಯನ ವಿರುದ್ಧ ಅರೋಪ ಮಾಡಿ ವಿಷ ಸೇವಿಸುವ ಮೂಲಕ ಸಾವಿಗೆ ಶರಣಾಗಲು ಪ್ರಯತ್ನಿಸಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಮೊಗ್ಗ ಪಾಲಿಕೆಯ ಪೌರಕಾರ್ಮಿಕ ಮೂರ್ತಿಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ಬೆಳಗ್ಗೆ ಭೇಟಿಯಾಗಿ ಧೈರ್ಯ ತುಂಬಿದರು. ಹೀಗೆಲ್ಲ ಮಾಡೋದು ಸರಿಯಲ್ಲ, ಬೆಳೆದ ಮಕ್ಕಳಿರುವ ನೀನು ಕನಿಷ್ಠ ಅವರ ಬಗ್ಗೆಯಾದರೂ ಯೋಚನೆ ಮಾಡಬೇಕು, ಸಾವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ, ನಿನಗೆ ಯಾವುದೇ ಸಮಸ್ಯೆ ಎದುರಾದರೂ ನನಗೆ ಫೋನ್ ಮಾಡು ಎಂದು ಹೇಳಿದ ಸಚಿವ ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಫೋನ್ ನಂಬರ್ ನೀಡಿದರು.