ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ ವಿಲೀನಗೊಳಿಸುವ ವಿಚಾರಕ್ಕೆ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ಸುಮಾರು ಶೇಕಡ 23ರಷ್ಟು ಜನಸಂಖ್ಯೆ ಇದೆ, ಈ ಸಮುದಾಯದಲ್ಲೂ ಬಡವರಿದ್ದಾರೆ, ಅಂತವರ ಆರ್ಥಿಕ, ಸಾಮಾಜಿಕ ಹೇಳಿಕೆಗಾಗಿ ನಿಗಮವನ್ನು ಪ್ರೇರೇಪವಾಗಿ ಸ್ಥಾಪಿಸಲಾಗಿದೆ. ಆದರೆ, ಇದನ್ನು ಬೆರಳು ನಿಗಮದ ಜೊತೆಗೆ ಹುಲಿನಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಈ ಬಾರಿ ವಿವಿಧ ಯೋಜನೆಗಳಿಗಾಗಿ ಫಲಾನುಭವಿಗಳಿಂದ ಸುಮಾರು 55 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ.
ಆದರೆ, ಇವರೆಲ್ಲರಿಗೂ ಯೋಜನೆಯನ್ನು ತಲುಪಿಸಲು ಈಗ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಹೀಗಾಗಿ ನಮ್ಮ ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇನೆ. ಸಿಎಂ ಕೂಡ ಅನುದಾನ ನೀಡುವ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೆಚ್ಚಿನ ಅನುದಾನ ನೀಡಿದರೆ, ಈ ಸಮುದಾಯದಲ್ಲಿರುವ ಬಡವರಿಗೆ ಯೋಜನೆಗಳನ್ನು ನೀಡಲು, ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪಂಚಮಸಾಲಿ ಹೋರಾಟ ವಿಚಾರ ಸಿಎಂ ಜೊತೆಗೆ ಚರ್ಚೆ: ಈ ಹಿಂದೆ ಪಂಚಮಸಾಲೆ ಸಮುದಾಯಕ್ಕೆ 2ಂ ಮೀಸಲಾತಿ ನೀಡಬೇಕು ಎಂದು ರಾಜ್ಯಾದ್ಯಂತ ಹೋರಾಟ ಮಾಡಿದ್ದೆವು. ಇದರ ಫಲವಾಗಿ ಇಂದಿನ ಬಿಜೆಪಿ ಸರ್ಕಾರ ಶೇಕಡ 2ರಷ್ಟು ಮೀಸಲಾತಿಯನ್ನು 2ಸಿ ಹಾಗೂ 2ಡಿ ಯ್ಲಲಿ ನೀಡಿದರು. ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅಲ್ಲೇ ಮೀಸಲಾತಿಗೆ ತಡೆಯಾಗಲಿ ಸಿಕ್ಕಿದೆ. ಈ ಕುರಿತು ಸಿಎಂ ಅವರೊಂದಿಗೆ ಸಮಾಜದ ಮುಖಂಡರು ಚರ್ಚಿಸಿದ್ದು, ತಡರಾತ್ರಿ ತೆಲುಗು ಬಳಿಕ ಮೀಸಲಾತಿ ಬಗ್ಗೆ ನಿರ್ಧಾರ ಮಾಡುದಾಗಿ ತಿಳಿಸಿದ್ದಾರೆ ಎಂದು ವಿಜಯಾನಂದ ಹೇಳಿದರು.
ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡುವೆ : ನಾನು ಈಗ ನಿಗಮದ ಅಧ್ಯಕ್ಷನಾಗಿರಬಹುದು, ಆದರೆ, ಇದೇ ಅವಧಿಯಲ್ಲಿ ಇನ್ನೊಂದು ಮೆಟ್ಟಿಲು ಮೇಲೆ ಹೋಗಿ ಸಚಿವ ಆಗುತ್ತೇನೆ. ಆಕಲವೂ ಕೂಡ ಶೀಘ್ರದಲ್ಲಿ ಬರಲಿದೆ ಎಂದು ಮಾರ್ವಿಕವಾಗಿ ನುಡಿದರು.ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ವೀರಶೈವ ಭವನ ಹಾಗೂ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವ ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.