ಪರ್ತ್ ನ ಪಿಚ್ ನಲ್ಲಿ ಭಾರತ ತಂಡ ಆಸೀಸ್ ವೇಗಿಗಳ ಅಬ್ಬರದೆದುರು ನಿಲ್ಲಲಾರದೆ 150 ರನ್ ಗಳಿಗೆ ಸರ್ವಪತನ ಕಂಡಾಗ ಎಲ್ಲವೂ ಮುಗಿಯಿತೆಂದೇ ಎಲ್ಲರ ಭಾವನೆಯಾಗಿತ್ತು. ಆದರೆ ಅದೇ ಪಿಚ್ ನಲ್ಲಿ ನಾಯಕ ಜಸ್ಪ್ರಿತ್ ಬುಮ್ರಾ ನೇತೃತ್ವದ ವೇಗಿಗಳ ಪಡೆ ಭಾರೀ ತಿರುಗೇಟು ನೀಡಿದೆ.
ಇಲ್ಲಿನ ಆಪ್ಟಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ದಿನ ವೇಗಿಗಳದ್ದೇ ಕಾರುಬಾರು. ಪಂದ್ಯದ ಮೊದಲ ದಿನವೇ ಉಭಯ ತಂಡಗಳ ಎರಡೂ ಇನಿಂಗ್ಸ್ಗಳಿಂದ 17 ವಿಕೆಟ್ ಉರುಳುವ ಮೂಲಕ ನಿಗದಿತ ಅವಧಿಗಿಂತಲೂ ಮೊದಲೇ ಪಂದ್ಯ ಮುಗಿಯುವ ಮುನ್ಸೂಚನೆ ಲಭಿಸಿದೆ.
1952ರ ನಂತರ ಆಸ್ಪ್ರೇಲಿಯಾ ನೆಲದಲ್ಲಿ ಟೆಸ್ಟ್ನ ಮೊದಲ ದಿನವೇ 17 ವಿಕೆಟ್ ಉರುಳಿದ್ದು ಇದೇ ಮೊದಲು. ಎಲ್ಲಾ ವಿಕೆಟ್ಗಳು ವೇಗಿಗಳ ಪಾಲಾಗಿದ್ದು ಪಿಚ್ ವೇಗಿಗಳ ಸ್ನೇಹಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.