ಇವತ್ತಿನ ಈ ಪುಣ್ಯ ದಿನವನ್ನು ವಿಷ್ಣುವಿನ ಧಾಮವನ್ನು ನಮ್ಮ ಮನೆಯನ್ನಾಗಿಸಿಕೊಳ್ಳಬಲ್ಲಂತಹ ಅವಕಾಶ ಒದಗಿಸುವ ಪವಿತ್ರವಾದ ದಿನ ಎಂದು ಹೇಳಲಾಗುತ್ತದೆ.ಭಾರತದಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದಾನೆ ವಿಷ್ಣು ಇಂದು ವಿಷ್ಣು ಮುಕ್ತವಾಗಿ ಎಲ್ಲರಿಗೂ ವೈಕುಂಠದ ದೈವತ್ವದ ಬಾಗಿಲನ್ನು ತೆರೆದಿರುತ್ತಾನೆ. ಹಸುವಿಗೆ ಆಹಾರವನ್ನು ಕೊಟ್ಟು ಇವತ್ತು ಎಲ್ಲರೂ ವಿಷ್ಣುವಿನ ದರ್ಶನ ಪಡೆದರೆ ಶಾಶ್ವತವಾಗಿ ಜೀವನ ಪರ್ಯಂತ ಅವರ ನೋವುಗಳು ಸಂಕಷ್ಟ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಹಾಗಾಗಿ ವೆಂಕಟ ಎಂದರೆ ತೊಂದರೆಗಳನ್ನು ಸುಡುವವನು ಎಂದು ಅರ್ಥ ಯಾವತ್ತಿಗೂ ವಿಷ್ಣುವಿನ ಬಳಿಗೆ ಬಂದ ಭಕ್ತರನ್ನು ರಕ್ಷಿಸಿ ಆಶೀರ್ವದಿಸಿ ಅವರ ಮನೆಗಳನ್ನು ಯಶಸ್ಸು ಸಂತೃಪ್ತಿ ಆರೋಗ್ಯ ಸಿರಿ ಸಂಪತ್ತುಗಳನ್ನು ರಾಶಿ ರಾಶಿಯಾಗಿ ತುಂಬಿ ಕೊಡುವಂತಹ ದಿನ ಹಾಗಾಗಿ ವೈಕುಂಠ ಏಕಾದಶಿ ಎಂದು ಭಕ್ತಾದಿಗಳು ವೆಂಕಟೇಶ್ವರನ ದೇವಾಲಯಕ್ಕೆ ಹೋಗಿ ಬರುವುದು ಎಲ್ಲರಿಗೂ ಸಂಪ್ರದಾಯವಾಗಿದೆ.
ಎಲ್ಲಾ ದೇವಾಲಯಗಳಲ್ಲಿ ವೈಕುಂಠ ದ್ವಾರ ವನ್ನು ಸಂಭ್ರಮದಿಂದ ಅಲಂಕರಿಸಿರುತ್ತಾರೆ ವೆಂಕಟೇಶ್ವರ ಎಂದರೆ ಕಲಿಯುಗದ ನಿಜವಾದ ದೈವ ವಿಷ್ಣುವಿನ ಅವತಾರ ಅವನು ಶ್ರೀನಿವಾಸ ಕೂಡ ಹೌದು ಶ್ರೀ ಎಂದರೆ ಲಕ್ಷ್ಮಿ ವಿಷ್ಣುವಿನ ಅತಿಪ್ರಿಯವಾದ ಮಡದಿಯೂ ಹೌದು. ಹಾಗಾಗಿ ಇಂದಿನ ವೈಕುಂಠ ಏಕಾದಶಿ ಭಾರತೀಯ ಹಬ್ಬ ಎಂದು ಜನರು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ಕುಟುಂಬ ಸಮೇತ ಶ್ರೀ ವಿಷ್ಣುವಿನ ದರ್ಶನ ಪಡೆದು ಪುನೀತರಾಗುತ್ತಾರೆ. ವೈಕುಂಠ ಎನ್ನುವುದು ಮಹಾವಿಷ್ಣುವಿನ ವಾಸಸ್ಥಾನ ವೈಕುಂಠ ಏಕಾದಶಿ ಎಂದು ಈ ವಿಷ್ಣುವಿನ ಮನೆಯ ಬಾಗಿಲು ಮುಕ್ತವಾಗಿ ಸರ್ವರಿಗೂ ತೆರೆದಿರುತ್ತದೆ ವಿಷ್ಣುವಿನ ಧಾಮವನ್ನು ನಾವೆಲ್ಲರೂ ಇಂದು ಪ್ರವೇಶಿಸಲು ಅಲ್ಲಿನ ವೈಭವವನ್ನು ಸುಂದರ ಜಗತ್ತು ಪ್ರತಿ ಕ್ಷಣವನ್ನು ಅನುಭವಿಸುವುದು ಹಾಗೂ ವೈಕುಂಠ ಏಕಾದಶಿಯು ದೈವತ್ವಗಳ ಸಂಗಮದ ದಿನವಾಗಿರುತ್ತದೆ.
ನಾಡಿನಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮವನ್ನು ಎಲ್ಲರೂ ತಮ್ಮ ಮನೆಗಳಲ್ಲಿ ಮಾಡುತ್ತಿದ್ದಾರೆ. ತಿರುಮಲದಲ್ಲಿರುವ ತಿರುಪತಿಯ ದರ್ಶನ ಇವತ್ತು ಮಾಡುವುದರಿಂದ ಅವರ ಸಂಕಷ್ಟಗಳೆಲ್ಲ ಪರಿಹಾರವಾಗುತ್ತದೆಂದು ಓಂ ಶ್ರೀ ಗೋವಿಂದ ನಮಃ ಎಂದು ಭಕ್ತಾದಿಗಳು ಲಕ್ಷ ಲಕ್ಷ ಜನರು ಇಂದು ಸಾಲಿನಲ್ಲಿ ನಿಂತು ಗಂಟೆ ಗಂಟೆಗಳವರೆಗೂ ಗೋವಿಂದ ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುವುದರ ಮುಖಾಂತರ ವಿಷ್ಣುವಿನ ಸಹಸ್ರನಾಮ ಪಠಿಸುವುದನ್ನು ನಾವು ಅವರ ವೈಭವವನ್ನು ಭಾರತದ ಪುಣ್ಯಭೂಮಿಯ ಇದೊಂದು ವಿಶಿಷ್ಟವಾದ ಆಚರಣೆಯನ್ನು ಕಣ್ತುಂಬಿಕೊಳ್ಳುವುದೇ ಸೊಬಗು ಎಂದು ಭಾವಿಸಿಕೊಳ್ಳಬಹುದಾಗಿದೆ.
ವಿಶ್ವದಲ್ಲಿರುವ ಭಾರತೀಯರೆಲ್ಲರಿಗೂ ದೇವತೆಗಳೆಂದರೆ ಆ ಆಲಯದಲ್ಲಿರುವ ವೈಶಿಷ್ಟ್ಯತೆಯ ಬಗ್ಗೆ ಮಹತ್ವತೆಯ ಕುರಿತು ಉತ್ಸಾಹ ಹೆಮ್ಮೆ ಹೆಚ್ಚಾಗಿರುತ್ತದೆ ಹಾಗೆಯೇ ಎಂದು ಪ್ರತಿ ಮಾಸದಲ್ಲಿ ಎರಡು ಏಕಾದಶಿಗಳು ಬರುತ್ತವೆ ಒಟ್ಟು ಒಂದು ವರ್ಷದಲ್ಲಿ 24 ಏಕಾದಶಿಗಳು ಇವೆ ಒಂದಕ್ಕಿಂತ ಒಂದು ವಿಶಿಷ್ಟವಾಗಿ ವಿಭಿನ್ನವಾಗಿವೆ. ಅವುಗಳ ತತ್ವ ಅಭಿಮಾನಿ ದೇವತೆಗಳು ಸಹ ಪುರಾಣ ಪುಣ್ಯ ಕಥೆಗಳು ಹೇಳುವ ರೀತಿಯೂ ಕೂಡ ಬೇರೆ ಬೇರೆಯಾಗಿವೆ.
ಅವುಗಳ ಫಲಗಳು ಕೂಡ ಎಲ್ಲರಿಗೂ ಸಲ್ಲುವುದಿಲ್ಲ ಕೆಲವೊಬ್ಬರು ಮಾತ್ರ ಅವುಗಳಿಗೆ ಅರ್ಹರಾಗಿರುತ್ತಾರೆ. ಹಾಗೆಯೇ ಒಂದೊಂದ್ರಫಲಗಳು ಒಂದೊಂದು ರೀತಿಯ ಯಶಸ್ಸಿಗೆ ಹೆಬ್ಬಾಗಿಲುಗಳಾಗುತ್ತವೆ ಪುಷ್ಯ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಈ ಏಕಾದಶಿ ವೈಕುಂಠ ಏಕಾದಶಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ ಇಂದು ಈ ಏಕಾದಶಿಯ ಉಪವಾಸ ಅತ್ಯಂತ ಶ್ರೇಷ್ಠವಾದದ್ದು ಅದು ವಿಶೇಷವೂ ಹೌದು ಆ ವರ್ಷದಲ್ಲಿ ಬರುವ ಏಕಾದಶಿಗಳಲ್ಲಿ ವ್ರತ ಉಪವಾಸ ಮಾಡಿದರೆ ಪುಣ್ಯಪ್ರಾಪ್ತಿ ಸ್ವರ್ಗಪ್ರಾಪ್ತಿ ವಿಷ್ಣುವಿನ ದರ್ಶನ ಶಾಶ್ವತವಾಗಿ ಪ್ರಾಪ್ತಿಯಾಗುತ್ತದೆ ಎಂದು ಅದರಲ್ಲೂ ಧನುರ್ಮಾಸದಲ್ಲಿ ಬಂದಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ ಇಂದು ಮಹಾವಿಷ್ಣು ಮುರಾ ಎಂಬ ಅಸುರನನ್ನು ಏಕದಶ ಎಂಬ ತನ್ನ ಆಯುಧದಿಂದ ಸಂಹಾರ ಮಾಡಿದ ಪವಿತ್ರವಾದ ದಿನ ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ಪುಣ್ಯ ಪವಿತ್ರ ನಿಷ್ಕಾಮ ಸೇವೆಯ ಅಪರೂಪದ ದಿನ ಹಾಗೆ ಪಿತಾಮಹ ಗೌರವಾನ್ವಿತ ಭೀಷ್ಮರು ವಿಷ್ಣು ಸಹಸ್ರನಾಮವನ್ನು ರಣರಂಗದಲ್ಲಿ ಎಲ್ಲರಿಗೂ ಬೋಧಿಸಿದ ದಿನವು ಇಂದಿನ ವೈಕುಂಠ ಏಕಾದಶಿಯಾಗಿದೆ.
ಇನ್ನೊಂದು ಪುರಾಣದ ಪ್ರಕಾರ ಏಕಾದಶಿ ವ್ರತ ಇಂದು ಮಾಡುವುದರಿಂದ ಪಿತೃದೋಷ ಪರಿಹಾರವಾಗಿ ಅದನ್ನು ಮೋಕ್ಷದ ಮತ್ತು ಪುತ್ರದ ಏಕಾದಶಿ ಎಂದು ತಂದೆ ಮಕ್ಕಳ ಸಂಬಂಧವನ್ನು ವೈಕುಂಠದಲ್ಲಿಯೂ ಅನನ್ಯವಾದ ಭಾವನೆಯಿಂದ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ.ಏಕಾದಶಿ ದಿನ ಆಹಾರ ತ್ಯಾಗ ಮಾಡಬೇಕು ಅಂದರೆ ಆವತ್ತು ಇಡೀ ದಿನ ಅನ್ನವನ್ನು ತೆಗೆದುಕೊಳ್ಳದೆ ಮನಸ್ಸು ಆರೋಗ್ಯ ವಾಗಿಡಲು ಸಂತೃಪ್ತವಾಗಿರಲು ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ ಹೀಗೆ ದೇಹ ಬುದ್ಧಿ ಎರಡನ್ನು ಸಮತೋಲನದಲ್ಲಿ ಇಡಬೇಕಾಗುತ್ತದೆ ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು ಚುರುಕುಗೊಳಿಸುವುದು ಎಂದು ಪ್ರಾಚೀನ ಕಾಲದಲ್ಲಿ ವೈಜ್ಞಾನಿಕವಾಗಿ ಹೊಸ ಗಾಳಿ ಜನರಿಗೆ ಹೊಸತನ್ನು ನೀಡುವುದಕ್ಕಾಗಿ ಉಪವಾಸ ಮಾಡಬೇಕಾಗುತ್ತದೆ.
ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು ಎಂದು ನಮ್ಮ ಪೂರ್ವಜರು ಅನಾದಿಕಾಲದಿಂದ ಆರೋಗ್ಯ ಕುರಿತು ದೈವತ್ವದ ಬಗ್ಗೆ ಹೇಗೆ ನಾವೆಲ್ಲರೂ ಬದುಕಬೇಕೆಂದು ವಿವರಿಸಿದ್ದಾರೆ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಕೆಟ್ಟ ಯೋಚನೆಗಳನ್ನು ಮಾಡದೆ ಭಗವಂತನ ಸಮೀಪ ಇರೋದು ಆ ಸಮಯದಲ್ಲಿ ಶುದ್ಧ ಮನಸ್ಸಿನಿಂದ ಏಕಾಂತವಾಗಿ ಧ್ಯಾನ ಭಜನೆ ಸಂಗೀತ ವೀಣೆ ಹೀಗೆ ವಿಷ್ಣು ಸಹಸ್ರನಾಮ ಪಠಣ ಮಾಡಬೇಕು ಉಪವಾಸ ಮಾಡುವುದರಿಂದ ಎಲ್ಲರಲ್ಲಿ ಶಾಂತಿ, ತಾಳ್ಮೆ ಏಕಾಗ್ರತೆ ಹಾಗೂ ಸಂತೃಪ್ತಿಯನ್ನು ಸಿಗುವುದು.
ದೇವಾನುದೇವತೆಗಳೆಲ್ಲ ಇವತ್ತು ವಿಷ್ಣುವಿನ ಪವಿತ್ರವಾದ ಸ್ಥಾನ ವೈಕುಂಠದಲ್ಲಿ ಸಂಭ್ರಮಿಸಿ ವೈಭೋಗದಿಂದ ಸಿರಿ ಸಂಪತ್ತುಗಳನ್ನು ತಮ್ಮ ಭಕ್ತಾದಿಗಳಿಗೆ ಸಂಪೂರ್ಣವಾಗಿ ತೃಪ್ತಿಗೊಳಿಸುವಂತಹ ಅವರ ಎಲ್ಲಾ ಸಂಕಷ್ಟಗಳು ನೋವುಗಳು ಪರಿಹರಿಸಿ ಸಮೃದ್ಧಿಯಿಂದ ಶಾಂತತೆಯಿಂದ ಯಶಸ್ಸನ್ನು ಸಾಧಿಸಲು ಆಶೀರ್ವದಿಸುವ ಪುಣ್ಯ ದಿನವಾಗಿದೆ ಹಾಗಾಗಿ ವೈಕುಂಠ ಏಕಾದಶಿಯು ಭಾರತೀಯರ ಹಬ್ಬಗಳಲ್ಲಿ ಸಂಭ್ರಮಿಸುವ ಬಹುದೊಡ್ಡದಾದ ದೈವತ್ವದ ಆರಾಧನೆಯ ಅರ್ಚನೆಯ ಅಮೃತಮಂಥನದ ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಸು ದಿನವೆಂದು ಹೇಳಲಾಗುತ್ತದೆ.
ದಕ್ಷಿಣ ಭಾರತದ ತಿರುಮಲದ ತಿರುಪತಿ ಶ್ರೀರಂಗo ನ ಶ್ರೀರಂಗನಾಥ ಸ್ವಾಮಿ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಸರ್ವರ ಹಿತಕ್ಕಾಗಿ ಸಕಲರಿಗೂ ಸಂಪತ್ತು ಪ್ರಾಪ್ತಿಯಾಗಲು ದಾನ ಧರ್ಮಗಳು ಎಂದು ಮಾಡಲೇಬೇಕು. ವೈಕುಂಠ ಏಕಾದಶಿ ಎಂದು ಸೂರ್ಯೋದಯಕ್ಕೂ ಮುನ್ನವೆ ಎದ್ದು ಸ್ನಾನ ಮಾಡಬೇಕು ಉಪವಾಸ ಆರಂಭಿಸಿ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ವಿಷ್ಣು ಹಾಗೂ ಲಕ್ಷ್ಮೀಯನ್ನು ಪೂಜಿಸಬೇಕು ಇಡೀ ದಿನ ಉಪವಾಸ ಮಾಡಲು ಸಾಧ್ಯವಾಗದೇ ಇರುವ ಭಕ್ತಾದಿಗಳು ನಾನಾ ವಿಧದ ಹಣ್ಣು ಹಂಪಲುಗಳನ್ನು ಸೇವಿಸಬಹುದು ಏಕಾದಶಿ ಎಂದು ದಾನ ಧರ್ಮಗಳು ಮಾಡಿದ್ದಲ್ಲಿ ತಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರುತ್ತವೆ.
ಈ ವಿಶೇಷ ದಿನವನ್ನು ಸ್ವರ್ಗವಾಸಲ್ ಎಂಬ ವಿಶೇಷ ಪ್ರವೇಶವನ್ನು ಹೊಂದಿದ್ದು ಇದನ್ನು ಈ ದಿನ ಮಾತ್ರ ತೆರೆಯಲಾಗುತ್ತದೆ ವೈಕುಂಠದಲ್ಲಿ ಈ ಪ್ರವೇಶದ ಮುಕ್ತದ್ವಾರದ ಪುಣ್ಯಪ್ರಾಪ್ತಿಯಾಗಲು ವೈಕುಂಠ ಏಕಾದಶಿ ವಿಶೇಷವಾದ ದಿನವೆಂದು ಪುರಾಣ ಪುಣ್ಯ ಕಥೆಗಳಲ್ಲಿ ಇದರ ಮಹತ್ವವನ್ನು ವಿಷ್ಣು ಲಕ್ಷ್ಮಿಯರು ಪದ್ಮಾಸನದ ಮೇಲೆ ಕಮಲದ ಹೂವಿನ ನಡುವಿನಲ್ಲಿ ನಗುನಗುತ ಹಸನ್ಮುಖರಾಗಿ ಪದ್ಮಾಲಯದಂತೆ ಕಂಗೊಳಿಸುವ ಸಂಭ್ರಮಿಸುವ ಮುಖದಿಂದ ಎಲ್ಲರ ಇಷ್ಟಾರ್ಥಗಳನ್ನು ನೆರವೇರಿಸುವ ಆಶೀರ್ವಾದದಿಂದ ಮೂ ಮೂ ಕ್ಕೋಟಿ ದೇವರಗಳ ಸಮ್ಮುಖದಲ್ಲಿ ಸಂಚರಿಸುತ್ತಾ ಆಶೀರ್ವದಿಸುತ್ತ ತಥಾಸ್ತು ತಥಾಸ್ತು ತಥಾಸ್ತು ಎಂದು ಆಶೀರ್ವದಿಸುವ ಸುದಿನವೆಂದು ಭಾವಿಸಲಾಗುತ್ತದೆ.
ಜಗತ್ತಿನಲ್ಲಿರುವ ಭಾರತೀಯರೆಲ್ಲರಿಗೂ ವೈಕುಂಠ ಏಕಾದಶಿಯು ಒಳ್ಳೆಯದನ್ನು ಮಾಡಲಿ ಶುಭವನ್ನು ಆಶೀರ್ವದಿಸಲಿ ನಮ್ಮ ದೇಶ ಭಾಷೆ ಸಂಸ್ಕೃತಿ ಪರಂಪರೆ ವಾಸ್ತು ಶಿಲ್ಪ ಸಾಹಿತ್ಯ ಹಸಿರು ಉಸಿರಾಗಲಿ ರೈತರೆಲ್ಲರ ಬಾಳಿನಲ್ಲಿ ಬೆಳಕಾಗಲಿ ಭಾರತ ದೇಶವು ವಿಶ್ವದಲ್ಲಿ ಉನ್ನತ ಸ್ಥಾನಮಾನ ಪಡೆಯಲಿ ಎಂದು ಈ ಪವಿತ್ರವಾದ ದಿನದಲ್ಲಿ ತುಂಬು ಹೃದಯದಿಂದ ಹಾರೈಸುತ್ತೇವೆ.
ಇಂದು ಸಂಜೆ ಪತ್ರಿಕೆಯ ಬಳಗವು ಹಾಗೂ ಮಾತಂಗಿ ದೀವಟಿಗೆ ಕನ್ನಡ ಚಲನಚಿತ್ರದ ತಂಡದ ಪರವಾಗಿ ಸಮಸ್ತ ಭಾರತೀಯರೆಲ್ಲರಿಗೂ ಅವರೆಲ್ಲರ ಇಷ್ಟಗಳು ಈಡೇರಲಿ ವಿಷ್ಣು ಹಾಗೂ ತ್ರಿಮೂರ್ತಿಗಳು ಎಲ್ಲರನ್ನೂ ಆಶೀರ್ವದಿಸಲಿ ಒಳಿತನ್ನು ಮಾಡಲಿ ಎಲ್ಲರಿಗೂ ಕಲ್ಯಾಣವಾಗಲಿ ಎಂದು ಮನ ತುಂಬಿ ಶುಭ ಕೋರುತ್ತೇವೆ.