ಬೆಂಗಳೂರು: ಬನ್ನೆರಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿರುವ ಏಕಶಿಲಾ ವಿಗ್ರಹ ಶ್ರೀದೇವಿ ಭೂದೇವಿ ಸಮೇತ ಶ್ರೀ ವೈಕುಂಠ ನಾರಾಯಣ ಸ್ವಾಮಿ ದೇವಸ್ಥಾನದ 17ನೆ ವಾರ್ಷಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಗಣಪತಿ ನವಗ್ರಹ ಪುರಸ್ಕಾರ ಮತ್ತು ಮಹಾಮೃತ್ಯುಂಜಯ ಹೋಮ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಭಕ್ತ ಜನರು ಕೃಪಾಕಟಾಕ್ಷ ಹೊಂದಿದರು.
ಅಲ್ಲದೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಯದು ಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಮಹಾ ಸ್ವಾಮಿಗಳಿಂದ ಆಶೀರ್ವಚನ ನೆರವೇರಿತು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗಾನ ಕಲಭೂಷಣ ಡಾ. ನಾಗವಲ್ಲಿ ನಾಗರಾಜ್ ಮತ್ತು ಡಾ. ರಂಜಿನಿ ವಾಸುಕಿ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ತಂಡದಿಂದ ಲಯಲಾವಣ್ಯ ತಾಳವಾದ್ಯ ಭಕ್ತ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.