ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಲಭ್ಯತೆಯ ಬಗ್ಗೆ ಇನ್ನೂ ಅನುಮಾನ ಹಾಗೇ ಉಳಿದಿದೆ. ಬಿಸಿಸಿಐ ಸೂಚನೆಯಂತೆ ಬುಮ್ರಾ ಅವರು ಭಾನುವಾರ ಸಂಜೆ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿಗೆ ತಲುಪಿದ್ದಾರೆ. ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಓಅಂ)ಯಲ್ಲಿ ಬಿಸಿಸಿಐ ವೈದ್ಯರ ತಂಡವು ಅವರ ಆರೋಗ್ಯದ ಪರೀಕ್ಷೆ ಮತ್ತು ಅಗತ್ಯ ಸ್ಕ್ಯಾನಿಂಗ್ ಗಳನ್ನು ನಡೆಸಲಿದೆ.
ಟೈಂಸ್ ಆಫ್ ಇಂಡಿಯಾದ ವರದಿಗಳ ಪ್ರಕಾರ ಎನ್ ಸಿಎ ನಲ್ಲಿರುವ ತಜ್ಞರು ಎರಡರಿಂದ 3 ವಾರಗಳ ಕಾಲ ಬುಮ್ರಾ ಅವರ ಆರೋಗ್ಯದ ಬಗ್ಗೆ ನಿಗಾ ಇಡಲಿದ್ದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ವರದಿ ನೀಡಲಿದೆ.
ಕಳೆದ ತಿಂಗಳು ತಂಡದ ಆಯ್ಕೆ ಬಳಿಕ ಅಗರ್ಕರ್ ಅವರು, ಬುಮ್ರಾ ಅವರಿಗೆ ಐದು ವಾರಗಳ ವಿಶ್ರಾಂತಿ ತಿಳಿಸಲಾಗಿದೆ. ನಾವು ಸಹ ಅವರು ಫಿಟ್ ಆಗುವುದನ್ನು ಕಾಯುತ್ತಿದ್ದೇವೆ. ಏನಿದ್ದರೂ ಫೆಬ್ರವರಿ ಮೊದಲನೇ ವಾರದಲ್ಲಿ ಖಚಿತಪಡಿಸಬಹುದು ಎಂದು ತಿಳಿಸಿದ್ದರು.